ದಿಗಂತ ವರದಿ ರಾಯಚೂರು :
ಇಡಿ ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್ ಅಕೌಂಟ್ ಮೂಲಕ ಲಕ್ಷಾಂತರ ರೂಗಳ ವರ್ಗಾವಣೆ ಆಗಿರುವುದು ಬಯಲಾಗುವ ಮೂಲಕ ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಕುರಿತು ಆಳಕ್ಕೆ ಇಳಿದಂತೆ ಸ್ಪೋಟಕ ಮಾಹಿತಿಗಳಿಗ ಒಂದೊಂದಾಗಿ ಹೋರಣದಂತೆ ಹೊರಬರುತ್ತಿವೆ.
ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್ ಸಂಬಂಧಿ ಎನ್ನಲಾದ ವೆಂಕಟರಾವ್ ರೆಡ್ಡಿ ಇವರ ಕುಟುಂಬದ ನಾಲ್ವರ ಅಕೌಂಟಿಗೆ ಒಟ್ಟು 98 ಲಕ್ಷ ರೂಪಾಯಿ ನೆಕ್ಕಂಟಿ ಅಕೌಂಟ್ ಮೂಲಕವೇ ಇತರರ ಅಕೌಂಟಿಗೆ ಹಣ ಜಮಾ ಆಗಿದೆ.
ನೆಕ್ಕಂಟಿ ನಾಗರಾಜ್ ಸಂಬಂಧಿಗಳಾದ ಜಿಲ್ಲೆಯ ಸಿಂಧನೂರಿನ ಬೂದಿವಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ರೆಡ್ಡಿ ಹಾಗೂ ಆತನ ಇಬ್ಬರು ಮಕ್ಕಳು ಓರ್ವ ಮೊಮ್ಮಗನ ಅಕೌಂಟಿಗೆ ಲಕ್ಷ ಲಕ್ಷ ಹಣ ನೆಕ್ಕಂಟಿ ನಾಗರಾಜ್ ಅಕೌಂಟ್ ಮೂಲಕವೇ ವರ್ಗಾವಣೆ ಆಗಿರುವುದು ಸ್ಪಷ್ಟವಾಗಿದೆ.
ಬೂದಿಹಾಳ ಕ್ಯಾಂಪ್‌ನ ಕೋನಾ ವೆಂಕಟರಾವ್ ರೆಡ್ಡಿ ಮತ್ತು ಕುಟುಂಬದ ಸದಸ್ಯರ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿನ ಅಕೌಂಟಗಳಿಗೆ 2024ರ ಮಾರ್ಚ್ 8 ರಂದು ಜಮೆ ಮಾಡಲಾಗಿದೆ. ಈ ನಾಲ್ವರ ಅಕೌಂಟ್‌ಗಳು ಸದ್ಯಕ್ಕೆ ಬೆಂಗಳೂರಿನ ಇಡಿ ಅಧಿಕಾರಿಗಳ ಸೂಚನೆಯ ಮೇರೆಗೆ ಬ್ಯಾಂಕ್ ಅಧಿಕಾರಿಗಳು ಸೀಜ್ ಮಾಡಿರುವರು.
ಈ ಬ್ಯಾಂಕ್ ಖಾತೆಗಳಲ್ಲಿ ವೆಂಕಟರಾವ್ ರೆಡ್ಡಿ ಖಾತೆಗೆ 12 ಲಕ್ಷ, ಪುತ್ರಿ ಲಕ್ಕಂಸಾನಿ ಲಕ್ಷಿö್ಮಅಕೌಂಟಿಗೆ 25 ಲಕ್ಷ, ಮತ್ತೋರ್ವ ಪುತ್ರಿ ರತ್ನಕುಮಾರಿ ಅಕೌಂಟಿಗೆ 25 ಲಕ್ಷ ಹಾಗೂ ಮೊಮ್ಮಗ ಸುನೀಲ್ ಅಕೌಂಟಿಗೆ 36 ಲಕ್ಷ ಜಮಾ ಮಾಡಲಾಗಿದೆ.
ನೆಕ್ಕಂಟಿ ನಾಗರಾಜ್ ತನ್ನ ಸಂಬಂಧಿಕರಿಗೆ ಕಮಿಷನ್ ಆಸೆ ತೋರಿಸಿ ಜಮಾ ಮಾಡಿದ್ದಾರೆ. ಜಮೆ ಆಗಿರುವ ಹಣದಲ್ಲಿ ಸ್ವಲ್ಪ ಹಣವನ್ನು ವೆಂಕಟರಾವ್ ರೆಡ್ಡಿ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಕಂತೆ ಕಂತೆ ಹಣ ಮಾರ್ಚ್ನಲ್ಲಿನೇ ವರ್ಗಾವಣೆ ಆಗುವುದಕ್ಕೆ ಪ್ರಾರಂಬವಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇಡಿ ಇಂದ ಬಂಧಿನ ಮಾಜಿ ಸಚಿವ ನಾಗೇಂದ್ರ ಅವರು ಈ ವೇಳೆಗಾಗಲೇ ವಾಲ್ಮೀಕಿ ನಿಗಮದಲ್ಲಿನ ಹಣವನ್ನೆಲ್ಲ ನುಂಗುವುದಕ್ಕೆ ಪ್ರಾರಂಭಿಸಿದ್ದರಾ ಈ ಮಾಹಿತಿ ತಿಳಿದು ಎಲ್ಲಿ ಇದೆಲ್ಲ ನನ್ನ ತಲೆ ಮೇಲೆ ಬರುತ್ತದನೋ ಎಂದು ಆತಂಕ್ಕಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದರಾ ಚಂದ್ರಶೇಖರ್ ಎನ್ನುವ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ.
ವಾಲ್ಮೀಕಿ ನಿಗಮದ ಅಕ್ರಮ ವರ್ಗಾವಣೆ ಆದ ಹಣದ ಮೂಲ ಹುಡುಕುವುದಕ್ಕೆ ತನಿಖೆಗಿಳಿದಿದ್ದ ಇಡಿಗೆ ಈ ಹಣ ವರ್ಗಾವಣೆಯ ಮಾಹಿತಿಯಿಂದ ಇಡಿ ಹಾದಿ ಸುಗಮವಾದಂತೆ ಎನ್ನಬಹುದು. ಇಲ್ಲಿ ಬಹುತೇಕ ಮಾಜಿ ಸಚಿವ ನಾಗೇಂದ್ರ ಮತ್ತವರ ಆಪ್ತರಿಂದಲೇ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಖಚಿತವಾದಂತಾಗಿದೆ.