ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಜರ್ಮನಿಯ ಬರ್ಲಿನ್ನಲ್ಲಿ ‘ಬೆತ್ತಲೆ ಪಾರ್ಟಿ’ ನಡೆದಿತ್ತು. ಈ ಪಾರ್ಟಿಗೆ ಅನೇಕ ತಾರೆಯರು ಸದ್ದಿಲ್ಲದಂತೆ ಭಾಗವಹಿಸುತ್ತಿರುತ್ತಾರೆ. ಅದರಂತೆಯೇ ಕನ್ನಡದ ‘ವಿಶ್ವ’ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಚಿತ್ರಾ ಕೃಷ್ಣಮೂರ್ತಿಯವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದು, ಈ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಬರ್ಲಿನ್ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಆ ಪಾರ್ಟಿಗೆ ಹೋದ ಬಳಿಕ ನನಗೊಂದು ಸಂದೇಶ ನೆನಪಾಯ್ತು. ಅದೇನೆಂದರೆ ನಿಮ್ಮ ಮೆದುಳು ಬಿದ್ದೋಗುವಷ್ಟು ಮುಕ್ತವಾಗಿ ಇರಬೇಡಿ. ನಾನು ಎಂದೆಂದಿಗೂ ದೇಸಿ ಹುಡುಗಿ. ನನಗೆ ಸ್ನಾನ ಮತ್ತು ಗಾಯತ್ರಿ ಪಠಣ ಮಾಡುವ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.