ವರ್ಷಾಂತ್ಯದಲ್ಲಿ ಮಂಗಳೂರಿಗೆ ಬರಲಿದೆ ವಂದೇ ಭಾರತ್ ಸ್ಲೀಪರ್ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಾಂತ್ಯದಲ್ಲಿ ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.

ಕೇರಳದ ತಿರುವನಂತಪುರಂ- ಮಂಗಳೂರು ಮಾರ್ಗದಲ್ಲಿ 16 ಬೋಗಿಗಳ ಹೈಸ್ಪೀಡ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ. ಆಧುನಿಕ ಹವಾನಿಯಂತ್ರಿತ ಸ್ಲೀಪರ್ ಬರ್ತ್‌ಗಳು, ಸ್ವಯಂಚಾಲಿತ ಬಾಗಿಲುಗಳು, ಕವಚ್ ಸುರಕ್ಷತಾ ವ್ಯವಸ್ಥೆಗಳು, ಸುಧಾರಿತ ಪ್ರವೇಶ ಮತ್ತು ಜಿಪಿಎಸ್ ಆಧಾರಿತ ಡಿಸ್ಪ್ಲೇ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. 1,128 ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ ವಿನ್ಯಾಸಗೊಳಿಸಲಾದ ಈ ವಂದೇ ಭಾರತ್ ಸ್ಲೀಪರ್ ರೈಲು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!