ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.
ಅಹಮದಾಬಾದ್ನಿಂದ ರಾಜ್ಕೋಟ್ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಈ ವೇಳೆ ದುಷ್ಕರ್ಮಿಗಳ ಕಲ್ಲು ತೂರಾಟ ನಡೆಸಿದ್ದಾರೆ. ಆದ್ರೆ ಯಾರಿಗೂ ಗಾಯವಾಗಿಲ್ಲ. ಆದರೆ ರೈಲಿನ ಕಿಟಕಿಯ ಗಾಜು ಒಡೆದಿದೆ.
ರಾಜಕೋಟ್ನ ಬಿಲೇಶ್ವರ್ ಸ್ಟೇಶನ್ ಬಳಿ ಘಟನೆ ನಡೆದಿದ್ದು, ಈ ಕುರಿತು ರೈಲ್ವೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಾಜ್ಕೋಟ್ ರೈಲ್ವೆ ವಿಭಾಗದ ಭದ್ರತಾ ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ, ವಂದೇ ಭಾರತ್ ರೈಲು ಪ್ರಸ್ತುತ ರಾಜ್ಕೋಟ್ ವಿಭಾಗದಲ್ಲಿ ಚಲಿಸುತ್ತಿದೆ. ರೈಲು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬಿಲೇಶ್ವರದಿಂದ ರಾಜ್ಕೋಟ್ಗೆ ಬರುವಾಗ ರಾಜ್ಕೋಟ್ನಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು. ಅಪರಿಚಿತ ವ್ಯಕ್ತಿ ರೈಲಿನ ಮೇಲೆ ಕಲ್ಲು ತೂರಿದ್ದಾನೆ.ಆದರೆ ಈ ಕಲ್ಲು ತೂರಾಟದಿಂದ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ರೈಲಿನ ಸಿ 4- ಸಿ 5 ಬೋಗಿಯ ಕಿಟಕಿಯಲ್ಲಿ ಸಣ್ಣ ಬಿರುಕು ಕಂಡುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆಯ ನಂತರ, ನಾವು ತಕ್ಷಣ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಈವರೆಗೆ ಆರೋಪಿಯ ಬಗ್ಗೆ ಯಾವುದೇ ಪ್ರಮುಖ ಸುಳಿವು ಸಿಕ್ಕಿಲ್ಲ, ಆದರೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಕೋಟ್ ಮತ್ತು ಬಿಲೇಶ್ವರ್ ನಡುವೆ ಅನೇಕ ಗುಡಿಸಲುಗಳಿವೆ. ಅಲ್ಲಿ ಆಟವಾಡುತ್ತಿರುವ ಚಿಕ್ಕ ಮಕ್ಕಳು ಕೆಲವೊಮ್ಮೆ ರೈಲು ಬಂದಾಗ ಕಲ್ಲೆಸೆಯುತ್ತಾರೆ. ಕಲ್ಲು ತೂರಾಟ ಮಾಡದಂತೆ ಈ ಪ್ರದೇಶದಲ್ಲಿ ಪ್ರತಿವರ್ಷ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ನಮ್ಮ ತಂಡವು ಈ ವಿಷಯದಲ್ಲಿ ಸಮಗ್ರ ತನಿಖೆ ಪ್ರಾರಂಭಿಸಿದೆ.ಎಂದು ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ ತಿಳಿಸಿದರು.