ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ರೈಲು ಪ್ರಯಾಣದ ಹೊಸ ಅಧ್ಯಾಯ ಬರೆದು ಸುದ್ದಿಯಾಗುತ್ತಿರುವ ವಂದೇ ಭಾರತ ರೈಲನ್ನು ಪಡೆಯುವ ಸರದಿ ಈಗ ಕರ್ನಾಟಕಕ್ಕೂ ಬಂದಿದೆ.
ನವೆಂಬರ್ 10ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ವಂದೇ ಭಾರತ ರೈಲಿನ ಸೇವೆ ಲೋಕಾರ್ಪಣೆಯಾಗಲಿದೆ.
2019ರಲ್ಲಿ ವಂದೇ ಭಾರತ ರೈಲಿನ ಮೊದಲ ಅವತರಣಿಕೆಯಲ್ಲಿ ಎರಡು ರೈಲುಗಳು ಲೋಕಾರ್ಪಣೆಯಾಗಿದ್ದವು. ವಾರಾಣಸಿ-ದೆಹಲಿ ಮತ್ತು ದೆಹಲಿ-ಕಟರಾಗಳ ನಡುವೆ ವಂದೇ ಭಾರತ ಸೇವೆ ಆರಂಭವಾಗಿತ್ತು. ನಂತರ ಮೇಲ್ದರ್ಜೆಗೇರಿಸಿದ ವಂದೇ ಭಾರತದ ಎರಡನೇ ಅವತರಣಿಕೆಯಲ್ಲಿ ಅಹಮದಾಬಾದ್-ಮುಂಬೈ ಮತ್ತು ಊನಾ-ದೆಹಲಿ ನಡುವೆ ವಂದೇ ಭಾರತ ರೈಲು ಸಂಚಾರ ಆರಂಭಗೊಂಡಿತು.
ಇದೀಗ ಐದನೇ ರೈಲು ಕರ್ನಾಟಕದ ನೆಲದಲ್ಲಿ ಸಂಚರಿಸಲಿದೆ.