ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಪರಿಚಯಿಸಿದ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹೊಸ ಕೇಸರಿ ಬಣ್ಣ ಬಂದಿದೆ. ಈ ರೈಲುಗಳನ್ನು ನಿರ್ಮಿಸಲಾಗಿರುವ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಕಡು ನೀಲಿ ಬಣ್ಣದ ಬದಲಿಗೆ ಹೊಸ ಕೇಸರಿ ಬಣ್ಣವನ್ನು ನೀಡಲಾಗುತ್ತಿದೆ. ವಂದೇ ಭಾರತ್ ರೈಲುಗಳಿಗಾಗಿ ಈಗಾಗಲೇ 27 ಎಂಜಿನ್‌ಗಳನ್ನು ತಯಾರಿಸಲಾಗಿದೆ.
ವಂದೇ ಭಾರತ್ ರೈಲುಗಳನ್ನು ಸುಧಾರಿಸಲು ಕ್ರಮಗಳು
ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಚನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯನ್ನು ಶನಿವಾರ ಪರಿಶೀಲಿಸಿದರು. ದಕ್ಷಿಣ ರೈಲ್ವೆಯಲ್ಲಿ ಭದ್ರತಾ ಕ್ರಮ ಹಾಗೂ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸುಧಾರಣೆಗಳನ್ನು ಸಚಿವರು ಪರಿಶೀಲಿಸಿದರು. ವಂದೇ ಭಾರತ್ ರೈಲುಗಳಿಗೆ ಭಾರತದ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿ ಹೊಸ ಕೇಸರಿ ಬಣ್ಣವನ್ನು ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾದ ಉತ್ಸಾಹದಲ್ಲಿ ಭಾರತೀಯ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ರೈಲು ಎಸಿಗಳಿಂದ ಹಿಡಿದು ಶೌಚಾಲಯಗಳಿಗೆ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಸಚಿವರು ಪ್ರಸ್ತಾಪಿಸಿದರು.
ಹೊಚ್ಚ ಹೊಸ ಸುರಕ್ಷತಾ ವೈಶಿಷ್ಟ್ಯ
ಈ ರೈಲುಗಳಲ್ಲಿ ಆಂಟಿ ಕ್ಲೈಂಬರ್ಸ್ ಸಾಧನಗಳೊಂದಿಗೆ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉತ್ತರ ಪ್ರದೇಶದ ಗೋರಖ್‌ಪುರ ನಿಲ್ದಾಣದಲ್ಲಿ ಗೋರಖ್‌ಪುರ-ಲಕ್ನೋ ಮತ್ತು ಜೋಧ್‌ಪುರ-ಸಾಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಹೊಸ ನವೀಕರಿಸಿದ ಆವೃತ್ತಿಯನ್ನು ಉದ್ಘಾಟಿಸಿದರು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ದೇಶಾದ್ಯಂತ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಯಿತು.