ವರನಟನ 94ನೇ ಜನ್ಮದಿನ, ಅಣ್ಣಾವ್ರ ಸ್ಮಾರಕಕ್ಕೆ ಹರಿದು ಬಂದ ಜನಸಾಗರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರನಟ ಡಾ. ರಾಜ್ ಕುಮಾರ್ ಅವರ 94 ನೇ ಜನ್ಮದಿನವನ್ನು ಎಲ್ಲೆಡೆ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಣ್ಣಾವ್ರ ಹುಟ್ಟುಹಬ್ಬದ ದಿನ ಸಾಗರೋಪಾದಿಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕಕ್ಕೆ ಅಭಿಮಾನಿಗಳು ಬಂದುಪೂಜೆ ಸಲ್ಲಿಸಿದ್ದಾರೆ.
ಸ್ಮಾರಕದ ಮುಂದೆಯೇ ಕೇಕ್ ಕತ್ತರಿಸುವುದು, ರಕ್ತದಾನ, ನೇತ್ರದಾನ, ಅನ್ನಸಂತರ್ಪಣೆಯಂಥ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ಡಾ. ರಾಜ್ ಕುಟುಂಬದ ಸದಸ್ಯರು ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ, ಉನ್ನು ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿರದ ಅಭಿಮಾನಿಗಳು ತಮ್ಮ ಊರಿನಲ್ಲಿ ವರನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ರಕ್ತದಾನ, ಉಚಿತ ಫಲಾಹಾರ ಹಂಚಿಕೆ, ನೇತ್ರದಾನದ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!