ಇದೆಂಥಾ ಮದುವೆ ಆಮಂತ್ರಣ ಪತ್ರಿಕೆ ಗುರುವೇ, ಓದಿದವರಿಗೆ ತಲೆ ತಿರುಗೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಸಂಭ್ರಮ ಮೊದಲಾಗುವುದೇ ಆಮಂತ್ರಣ ಪತ್ರಿಕೆಯಿಂದ. ವಿವಿಧ ರೀತಿಯ ಕಾರ್ಡ್‌ಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಮದುವೆ ಕಾರ್ಡ್‌ಗಳು ಸುಂದರವಾಗಿರಬೇಕು, ಆಕರ್ಷಕವಾಗಿರಬೇಕು..ಇತರರಿಗಿಂತ ಭಿನ್ನವಾಗಿರಬೇಕೆಂದು ಎಲ್ಲರೂ ಯೋಚಿಸುತ್ತಾರೆ. ಅದರಂತೆಯೇ ಈಗ ಕಣ್ಣಿಗೆ ಕುಕ್ಕುವಂತ ಪತ್ರಿಕೆಗಳ ಕಾಣಸಿಗುತ್ತಿವೆ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪತ್ರಿಕೆ ಮಾತ್ರ ಬಹಳ ವಿಚಿತ್ರವಾಗಿದೆ.

@rayyanparhlo ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡ ಮದುವೆ ಕಾರ್ಡ್ ವೈರಲ್ ಆಗುತ್ತಿದೆ. ಇದು ಬಾಂಗ್ಲಾದೇಶದ ದಂಪತಿ ಸಂಜನಾ ತಬಸ್ಸುಮ್ ಸ್ನೇಹಾ ಮತ್ತು ಮಹಜೀಬ್ ಹೊಸೈನ್ ಇಮೋನ್ ಅವರ ವಿವಾಹ ಕಾರ್ಡ್ ಆಗಿದೆ. ಈ ವಿಶಿಷ್ಟ ವಿವಾಹ ಕಾರ್ಡ್ ದಂಪತಿ ಹೆಸರುಗಳು, ಸ್ಥಳ ಮತ್ತು ಮದುವೆಯ ಮಹತ್ವವನ್ನು ವಿವರಿಸುತ್ತದೆ. ಅಷ್ಟೇ ಅಲ್ಲದೆ, ಮೊದಲು ಭೇಟಿಯಾದ ಸ್ಥಳ, ಪರಿಚಯ ಮತ್ತು ಮದುವೆ ಪ್ರಕ್ರಿಯೆಯ ಎಲ್ಲವನ್ನು ವಿವರಿಸಲಾಗಿದೆ.

ಈ ಫೋಟೋ ನೋಡಿದವರು ಇಬ್ಬರು ಸಂಶೋಧಕರು ಮದುವೆಯಾಗುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ‘ಇದು ಮದುವೆ ಕಾರ್ಡ್‌ ಅಲ್ಲ, ಸಂಶೋಧನಾ ಪ್ರಬಂಧದಂತಿದೆ’. ಈ ಕಾರ್ಡ್ ನೋಡಿದ ನಂತರ ಕೆಲವರಿಗೆ ಹೊಸ ಐಡಿಯಾಗಳು ಬಂದಿದ್ದು ಆಶ್ಚರ್ಯವೇನಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!