Wednesday, October 5, 2022

Latest Posts

ಬೆಟ್ಟ ಕುರುಬ ಜಾತಿ ಸಹಿತ 5 ರಾಜ್ಯಗಳ ವಿವಿಧ ಜಾತಿಗಳು ಎಸ್​ಟಿ ಪಟ್ಟಿಗೆ: ಕೇಂದ್ರ ಸರ್ಕಾರ ಸಮ್ಮತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಬೆಟ್ಟ ಕುರುಬ ಜಾತಿ ಸಹಿತ 5 ರಾಜ್ಯಗಳ ವಿವಿಧ ಜಾತಿಗಳನ್ನು ಎಸ್​​ಟಿಗೆ ಸೇರಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕುರುಬ ಸಮುದಾಯದ ಒಳ ಪಂಗಡವಾದ ಹಿಂದುಳಿದ ಬೆಟ್ಟ ಕುರುಬ ಜಾತಿಯನ್ನು ಎಸ್​ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಅನುಮೋದನೆ ನೀಡಲಾಯಿತು.

ಛತ್ತೀಸ್​ಗಢ, ಹಿಮಾಚಲಪ್ರದೇಶ, ತಮಿಳುನಾಡು, ಉತ್ತರಪ್ರದೇಶದ ಜಾತಿಗಳಿಗೂ ಎಸ್​ಟಿ ಪಟ್ಟಿಗೆ ಸೇರಿಸಲು ಸಂಪುಟ ಅನುಮತಿ ನೀಡಿದೆ. ಈಗಾಗಲೇ ಕುರುಬ ಸಮುದಾಯದ ಜೇನು ಕುರುಬ, ಕಾಡು ಕುರುಬ ಜಾತಿಗಳು ಎಸ್​ಟಿ ಪಟ್ಟಿಯಲ್ಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!