ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಿಂದ ಹೊರಬಂದಮೇಲೆ ಕಂಟೆಸ್ಟೆಂಟ್ಸ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಇದೀಗ ಇಂಟರ್‌ವ್ಯೂ ಒಂದರಲ್ಲಿ ವರ್ತೂರ್ ಸಂತೋಷ್ ಪತ್ನಿ ಬಗ್ಗೆ ಮಾತನಾಡಿದ್ದಾರೆ. ನಿಮಗೆ ಮದುವೆ ಆಗಿದೆ ಎಂದು ಗೊತ್ತು, ಜಗಳ ಆಡಿ ದೂರ ಆಗಿದ್ದೀರಾ ಎಂದು ಕೇಳಿದ್ದಾರೆ.
ಅದಕ್ಕೆ ಏಕಾಏಕಿ ಗರಂ ಆದ ವರ್ತೂರ್ ಪರ್ಸನಲ್ ವಿಷ್ಯಕ್ಕೆ ಯಾಕೆ ಕೈ ಹಾಕ್ತೀರಾ? ಪಬ್ಲಿಕ್ ಅಲ್ಲಿ ಪರ್ಸನಲ್ ವಿಷ್ಯ ಮಾತಾಡೋ ಅಷ್ಟು ದಡ್ಡ ನಾನಲ್ಲ. ಯಾರು ಕೆಟ್ಟ ವಿಷಯ ಸ್ಪ್ರೆಡ್ ಮಾಡ್ತರೋ ಮಾಡ್ಲಿ, ನಾನು ತಲೆಕೆಡಿಸಿಕೊಳ್ಳೋದಿಲ್ಲ. ಎಲ್ಲರ ಮನೆಯ ದೋಸೆಯೂ ತೂತೇ ಎಂದು ಹೇಳಿದ್ದಾರೆ.