ಮಲೆನಾಡಿನಲ್ಲಿ ತಂಪೆರೆದ ವರುಣ: ಖುಷಿಪಟ್ಟ ರೈತರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೆನಾಡಿನ ವರುಣ ತಂಪೆರೆದಿದ್ದಾನೆ. ಚಿಕ್ಕಮಗಳೂರಿನ (Chikkamagaluru) ಹಲವು ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ತಾಲೂಕಿನ ಮುತ್ತೋಡಿ ತಪ್ಪಲು, ಕೊಳಗಾಮೆ, ಮೇಲಿನ ಹುಲುವತ್ತಿ ಭಾಗಗಳು ಸೇರಿದಂತೆ ಹಲವು ಹಳ್ಳಿಗಳಲ್ಲಿ ಮಳೆಯಾಗಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ಕಾಫಿ ಬೆಳೆಗಾರರು ಹಾಗೂ ಅಡಿಕೆ, ಕಾಳು ಮೆಣಸು ಉಳಿಕೊಳ್ಳಲು ಪರದಾಡುತ್ತಿದ್ದ ರೈತರು, ಮಳೆ ಕಂಡು ಸಂತಸಕ್ಕೀಡಾಗಿದ್ದಾರೆ.

ಈ ಬಾರಿ ಸುರಿದ ವರ್ಷದ ಮೊದಲ ಮಳೆಯಾಗಿದ್ದು, ಮೊದಲ ಮಳೆಯೇ ದೊಡ್ಡ ಪ್ರಮಾಣದಲ್ಲಿ ಸುರಿದಿದೆ. ಒಂದೇ ಗಂಟೆಗೆ ಸುಮಾರು 3.84 ಸೆಂ.ಮೀ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!