August 20, 2026
Thursday, August 20, 2026
spot_img

ಬೆಂಗಳೂರಿನಲ್ಲಿ ವರುಣನ ಆರ್ಭಟ: ರಸ್ತೆಗಳು ಜಲಾವೃತ, ಅಂಡರ್‌ಪಾಸ್‌ ಬಂದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದೆ.

ವಿವಿಧ ಕಡೆ ಭಾರೀ ಮಳೆ

ಸಂಜೆಯಿಂದಲೇ ಮೋಡ ಕವಿದ ವಾತಾವರಣದಲ್ಲಿದ್ದ ನಗರಕ್ಕೆ ದಿಢೀರ್ ಎಂಬಂತೆ ವರುಣನ ಆಗಮನವಾಗಿದೆ ಮೆಜೆಸ್ಟಿಕ್, ಕಾರ್ಪೋರೇಶನ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಯಲಹಂಕ, ಹೆಬ್ಬಾಳ, ಸಹಕಾರನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಬನಶಂಕರಿ, ಕೋರಮಂಗಲ, ಶಾಂತಿನಗರ, ಆನಂದ ರಾವ್ ವೃತ್ತ, ವಿದ್ಯಾರಣ್ಯಪುರ, ಸಹಕಾರನಗರದಲ್ಲಿ ಮಳೆ, ಟೌನ್​ಹಾಲ್, ಮಾಗಡಿ ರಸ್ತೆ, ದಾಸರಹಳ್ಳಿ ಮೊದಲಾದ ಕಡೆ ಭಾರೀ ಮಳೆ ಸುರಿದಿದೆ.

ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆ

ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆಯಂತಾಗಿ ಮಾರ್ಪಟ್ಟಿವೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ.ಈ ಹಿನ್ನೆಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !