Monday, December 4, 2023

Latest Posts

ಐಪಿಎಲ್ ಎಲಿಮಿನೇಟರ್​​ ಪಂದ್ಯಕ್ಕೆ ವರುಣನ ಎಂಟ್ರಿ: ಟಾಸ್​​ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಐಪಿಎಲ್ ಎಲಿಮಿನೇಟರ್​​ ಪಂದ್ಯದಲ್ಲಿಂದು ಲಖನೌ ಸೂಪರ್ ಜೈಂಟ್ಸ್​​​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಆದರೆ, ಮಳೆಯ ಕಾರಣದಿಂದಾಗಿ ಟಾಸ್​​ನಲ್ಲಿ ವಿಳಂಬವಾಗಲಿದೆ.

ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಕ್ವಾಲಿಫೈಯರ್​ 1ರಲ್ಲಿ ಸೋತ ರಾಜಸ್ಥಾನ ವಿರುದ್ಧ ಹೋರಾಟ ನಡೆಸಲಿದೆ.
ವಿರಾಟ್​ ಕೊಹ್ಲಿ, ಹಿಂದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಫಾರ್ಮ್​ಗೆ ಮರಳಿದ್ದಾರೆ. ಇದರ ಜೊತೆಗೆ ನಾಯಕ ಡುಪ್ಲೆಸಿಸ್​, ಮ್ಯಾಕ್ಸವೆಲ್​, ಕಾರ್ತಿಕ್​ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಹಸರಂಗ, ಹರ್ಷಲ್ ಪಟೇಲ್, ಮ್ಯಾಕ್ಸಿ ಹಾಗೂ ಹ್ಯಾಜಲ್​​ವುಡ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ರಾಹುಲ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್​ ಇದೇ ಮೊದಲ ಸಲ ಐಪಿಎಲ್​ ಸ್ಪರ್ಧೆಯಲ್ಲಿ​ ಕಣಕ್ಕಿಳಿದಿದ್ದು, ಲೀಗ್​ ಹಂತದಲ್ಲಿ ತಾನು ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ದಾಖಲು ಮಾಡಿ 3ನೇ ತಂಡವಾಗಿ ಪ್ಲೇ – ಆಫ್​​​ ಪ್ರವೇಶ ಪಡೆದುಕೊಂಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!