ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ದಿನಗಳಿಂದ ಮೌನವಾಗಿದ್ದ ವರುಣ ಜೂನ್ ಮೊದಲ ದಿನವಾದ ನಿನ್ನೆ (ಜೂನ್ 1) ಬೆಂಗಳೂರಿಗೆ ಆಗಮಿಸಿದ್ದಾನೆ. ಇಂದು (ಜೂನ್ 2) ನಗರದ ಹಲವೆಡೆ ಮಳೆ, ಗಾಳಿ ಆರಂಭವಾಗಿದೆ.
ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್ ಹಾಲ್, ಕೆ.ಆರ್.ಮಾರುಕಟ್ಟೆ, ಕಾರ್ಪೊರೇಷನ್, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಚಾಲಕರು ಪರದಾಡುವಂತಾಯಿತು. ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಭಾರಿ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರಗಳು ಧರೆಗುರುಳಿವೆ.
ಈಗಾಗಲೇ ನೈರುತ್ಯ ಮುಂಗಾರು ನಿರೀಕ್ಷೆಗೂ ಮುನ್ನವೇ ದಕ್ಷಿಣ ಭಾರತದ ರಾಜ್ಯವಾದ ಕೇರಳವನ್ನು ತಲುಪಿದ್ದು, ಇಂದು ನೈಋತ್ಯ ಮುಂಗಾರು ಕರ್ನಾಟಕದ ಗಡಿ ತಲುಪಿದೆ. ಜತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಿಗೂ ಮುಂಗಾರು ಪ್ರವೇಶಿಸಲಿದೆ.