ಎರಡನೇ ಅಭ್ಯಾಸ ಪಂದ್ಯಕ್ಕೂ ವರುಣನ ಎಂಟ್ರಿ: ನೆದರ್​ಲ್ಯಾಂಡ್ಸ್​ ವಿರುದ್ಧದ ಟೀಮ್ ಇಂಡಿಯಾ ಮ್ಯಾಚ್ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಕಪ್​ಗೂ ಮುನ್ನ ಆಯೋಜಿಸಲಾಗಿದ್ದ ಭಾರತದ ಎರಡೂ ಅಭ್ಯಾಸ ಪಂದ್ಯಕ್ಕೆ ಮಳೆ ಎಂಟ್ರಿಕೊಟ್ಟಿದ್ದು, ಫಲಿತಾಂಶ ರಹಿತ ಮ್ಯಾಚ್​ಗಳಾಗಿವೆ.

ಮೊದಲ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಅಸ್ಸಾಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್​ ನಂತರ ಸುರಿದ ಮಳೆ ಒಂದು ಬಾಲ್​ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್​ಲ್ಯಾಂಡ್ಸ್​ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.

ತಿರುವನಂತರಪುರ ಮೈದಾನದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಪಂದ್ಯಗಳಿಗು ಮಳೆ ಅಡ್ಡಿ ಉಂಟುಮಾಡಿದೆ. ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಆಸ್ಟ್ರೇಲಿಯಾ vs ನೆದರ್​ಲ್ಯಾಂಡ್ಸ್​ ಮತ್ತು ಭಾರತ vs ನೆದರ್​ಲ್ಯಾಂಡ್ಸ್​ ಪಂದ್ಯ ಸಂಪೂರ್ಣ ಫಲಿತಾಂಶ ರಹಿತವಾದರೆ, ನಿನ್ನೆ (ಅಕ್ಟೋಬರ್​ 2) ನ್ಯೂಜಿಲೆಂಡ್​ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆ ಬಂದರೂ ಡಿಎಲ್​ಎಸ್​ ನಿಯಮದನ್ವಯ ಪಂದ್ಯವನ್ನು ನಡೆಸಲಾಯಿತು.

ಇಂದು ಅಭ್ಯಾಸ ಪಂದ್ಯದ ಕೊನೆಯ ದಿನವಾಗಿದೆ. ಅಕ್ಟೋಬರ್​ 5 ರಂದು ವಿಶ್ವಕಪ್​ನ ಉದ್ಘಾನೆ ಆಗಲಿದೆ. ಅಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​ ಸೆಣಸಲಿದೆ. ಈ ಮ್ಯಾಚ್​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೈದಾನ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!