ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವು ಮಳೆಯ ಕಾರಣ ರದ್ದಾಗಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಸತತ ಮಳೆಯಾಗಿದ್ದು, ಇದರಿಂದ ಪಂದ್ಯ ಆರಂಭವಾಗಿರಲಿಲ್ಲ. ಮಳೆ ನಿಂತ ಬಳಿಕ ಮೈದಾನವನ್ನು ಪರಿಶೀಲಿಸಿದ ಅಂಪೈರ್ಗಳು, ಔಟ್ ಫೀಲ್ಡ್ಗಳು ಒದ್ದೆಯಾಗಿರುವ ಕಾರಣ ಪಂದ್ಯ ನಡೆಸಲು ಸೂಕ್ತವಲ್ಲ ಎಂದು ತಿಳಿಸಿದರು. ಹೀಗಾಗಿ ಭಾರತ-ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಭಾರತ ತಂಡವು ತನ್ನ 2ನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3 ರಂದು ಆಡಲಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಇನ್ನು ಇಂಗ್ಲೆಂಡ್ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 2 ರಂದು ಬಾಂಗ್ಲಾದೇಶ್ ವಿರುದ್ಧ ಆಡಲಿದೆ.