ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ ಪಂದ್ಯಕ್ಕೆ ಮತ್ತೆ ವರುಣ ಎಂಟ್ರಿಕೊಟ್ಟಿದ್ದು, ಪಂದ್ಯ ಸ್ಥಗಿತವಾಗಿದೆ.
ಮೊದಲ ದಿನ ಮಳೆಯಿಂದ ಪಂದ್ಯ ರದ್ದಾಗಿ ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತು. ಮೀಸಲು ದಿನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 214 ರನ್ ಸಿಡಿಸಿತ್ತು. ಈ ಮೊತ್ತ ಚೇಸ್ ಮಾಡಲು ಕಣಕ್ಕಿಳಿಯುವ ಮುನ್ನವೇ ಮಳೆ ಆರಂಭಗೊಂಡಿತು. ಮೊದಲ ಓವರ್‌ನ 3 ಎಸೆತ ಮುಗಿಯುತ್ತಿದ್ದಂತೆ ಮಳೆ ಸುರಿದಿದೆ. ಹೀಗಾಗಿ ಪಂದ್ಯ ಸ್ಥಗಿತಗೊಳಿಸಲಾಗಿದೆ.
ಒಂದೇ ಸಮನೆ ಸುರಿದ ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಪಂದ್ಯ ಸ್ಥಗಿತಗೊಂಡಿದೆ.ಸದ್ಯ ಮಳೆ ಕಡಿಮೆಯಾಗಿದೆ. ಶೀಘ್ರದಲ್ಲೇ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಇದೆ.