ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
24 ಓವರ್ ಮುಕ್ತಾಯದ ವೇಳೆ ಮಳೆರಾಯನ ಎಂಟ್ರಿಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.
ಸದ್ಯ ಟೀಂ ಇಂಡಿಯಾ 24 ಓವರ್ ಮುಕ್ತಾಯದ ವೇಳೆ 1 ವಿಕೆಟ್ ಕಳೆದುಕೊಂಡು 115 ರನ್ ಸಿಡಿಸಿದೆ. ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆ್ಯಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ನಾಯಕ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಶತಕದ ಜೊತೆಯಾಟ ನೀಡಿದರು. ಧವನ್ 58 ರನ್ ಸಿಡಿಸಿ ಔಟಾದರು. 113 ರನ್‌ಗಳಿಗೆ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು.
ಶ್ರೇಯಸ್ ಅಯ್ಯರ್ ಜೊತೆ ಗಿಲ್ ಹೋರಾಟ ಮುಂದುವರಿಸಿದರು. ಇದೇ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಸದ್ಯ ಮಳೆ ಸುರಿಯುತ್ತಿದ್ದು ಪಂದ್ಯ ಆರಂಭ ವಿಳಂಭವಾಗಲಿದೆ.