ವಿಧ್ವಂಸ ಸೃಷ್ಟಿಸಿದ ಅಕಾಪುಲ್ಕೊ ಚಂಡಮಾರುತ: 39 ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕಾಪುಲ್ಕೊ ಚಂಡಮಾರುತಕ್ಕೆ 39 ಮಂದಿ ಬಲಿಯಾಗಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಚಂಡಮಾರುತ ದುರಂತಕ್ಕೆ ಇನ್ನೂ 10 ಮಂದಿ ಕಣ್ಮರೆಯಾಗಿದ್ದು, ಹಲವೆಡೆ ವಿಧ್ವಂಸ ಸೃಷ್ಟಿಸಿದೆ. ವಿದ್ಯುತ್, ನೀರು ಮತ್ತು ದೂರವಾಣಿ ಸೌಲಭ್ಯಗಳು ಹಾನಿಗೊಳಗಾಗಿವೆ. ಮೃತರಲ್ಲಿ, 10 ಮಹಿಳೆಯರು ಮತ್ತು 29 ಪುರುಷರು ಸೇರಿದ್ದಾರೆ ಎಂದು ಭದ್ರತಾ ಕಾರ್ಯದರ್ಶಿ ರೋಸಾ ಇಸೆಲಾ ರೋಡ್ರಿಗಸ್ ಹೇಳಿದ್ದಾರೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಚಂಡಮಾರುತದ ಬಳಿಕ ಸೂಪರ್ ಮಾರ್ಕೆಟ್ ಗಳಲ್ಲಿ ಲೂಟಿ ನಡೆಯುತ್ತಿದ್ದರಿಂದ 10 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಮೆಕ್ಸಿಕನ್ ಸೈನಿಕರು ಮತ್ತು ನೌಕಾ ಸಿಬ್ಬಂದಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಶಿಬಿರದಲ್ಲಿರುವ ಸಂತ್ರಸ್ತರಿಗೆ ಎಳನೀರು ಮತ್ತು ಆಹಾರ ಪದಾರ್ಥಗಳನ್ನು ವಿತರಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಗಿಂತ ಚಂಡಮಾರುತದ ಪ್ರಭಾವ ತೀವ್ರವಾಗಿದೆ. ಇದು ಮೆಕ್ಸಿಕೋ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಬಿಂಬಿಸಲಾಗಿದೆ. ರೆಸಾರ್ಟ್ ಪಟ್ಟಣದಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಸೇನಾ ಪಡೆಗಳು ಪ್ರಯತ್ನಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!