June 26, 2026
Friday, June 26, 2026
spot_img

VB-G RAM G ಗೆ ಪುತ್ತೂರಿನ ಯುವ ಕಲಾವಿದನ ಲೋಗೋ ಆಯ್ಕೆ: ಕರ್ನಾಟಕದ ಕೀರ್ತಿ ಹೆಚ್ಚಿಸಿದ ರಾಮ್ ಪ್ರಸಾದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಚಿತ್ರಕಲಾವಿದ, ಗ್ರಾಫಿಕ್ ಡಿಸೈನರ್ ರಾಮ್ ಪ್ರಸಾದ್ ಕೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ MyGov ವೇದಿಕೆಯಲ್ಲಿ ಆಯೋಜಿಸಿದ್ದ ‘Design a Logo for Viksit Bharat G-RAM-G Act 2025’ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.


ಕೇಂದ್ರ ಸರ್ಕಾರದ ‘ವಿಕಸಿತ ಭಾರತ್ G-RAM-G Act 2025’ ಯೋಜನೆಗಾಗಿ ರಾಮ್ ಪ್ರಸಾದ್ ವಿನ್ಯಾಸಗೊಳಿಸಿದ ಲೋಗೋವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. MyGov ಪ್ರಕಟಿಸಿರುವ ವಿಜೇತರ ಪಟ್ಟಿಯಲ್ಲಿ ಅವರ ಹೆಸರನ್ನು ಪ್ರಕಟಿಸಲಾಗಿದ್ದು, ಈ ಸಾಧನೆಗಾಗಿ ರೂ. 50,000 ನಗದು ಬಹುಮಾನ ಘೋಷಿಸಲಾಗಿದೆ.
ರಾಮ್ ಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆ ಹಾಗೂ ವಿನ್ಯಾಸ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ಇತ್ತು. ಶಾಲೆ ಮತ್ತು ಕಾಲೇಜು ದಿನಗಳಲ್ಲೇ ವಿವಿಧ ಚಿತ್ರಕಲೆ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದ ಅವರು, ಬಳಿಕ ಮಂಗಳೂರಿನ ಮಹಾಲಾಸ ಕಲಾ ಶಾಲೆಯಲ್ಲಿ ಕಲಾ ಶಿಕ್ಷಣ ಪಡೆದು ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದರು.

ಇದನ್ನೂ ಓದಿ:


ಸ್ಪರ್ಧೆಗಾಗಿ ಯೋಜನೆಯ ಉದ್ದೇಶವನ್ನು ಅಧ್ಯಯನ ಮಾಡಿದ ಅವರು ಹಲವು ಲೋಗೋ ಪರಿಕಲ್ಪನೆಗಳನ್ನು ಸಿದ್ಧಪಡಿಸಿದ್ದರು. ಕೊನೆಗೆ ರೂಪಿಸಿದ ವಿನ್ಯಾಸವನ್ನು MyGov ಪೋರ್ಟಲ್ ಮೂಲಕ ಸಲ್ಲಿಸಿದ್ದು, ಅದು ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದು ಕೇಂದ್ರ ಸರ್ಕಾರದ ಅಧಿಕೃತ ಲೋಗೋವಾಗಿ ಆಯ್ಕೆಯಾಗಿದೆ.


ಈ ಲೋಗೋವನ್ನು ಮುಂದಿನ ದಿನಗಳಲ್ಲಿ ‘Viksit Bharat G-RAM-G Act 2025’ ಯೋಜನೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು, ಜಾಗೃತಿ ಅಭಿಯಾನಗಳು, ಪ್ರಚಾರ ಸಾಮಗ್ರಿಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಳಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !