ಮೊಟ್ಟೆಯಿಲ್ಲದ ವೆಜ್‌ ಎಗ್‌ ಕರ್ರಿ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಟ್ಟೆ ತಿನ್ನದವರು ಹೀಗೆ ಒಮ್ಮೆ ಟ್ರೈ ಮಾಡಿ ನೋಡಿ. ಇದೊಂದು ಉತ್ತರ ಭಾಋತದ ರೆಸಿಪಿಯಾಗಿದ್ದು, ಚಪಾತಿ, ರೋಟಿ, ಪರಾಟ ಬಿಸಿ ಬಿಸಿ ಅನ್ನದ ಜೊತೆ ಬಹಳ ರುಚಿಕರವಾಗಿರುತ್ತದೆ.

ಬೇಕಾಗುವ ಪದಾರ್ಥಗಳು: 

ತುರಿದ 1 ಕಪ್‌ ಪನ್ನೀರ್
1/4ಟೀಸ್ಪೂನ್ ಉಪ್ಪು, ಟೀಸ್ಪೂನ್ ಅರಿಶಿನ
2 ಆಲೂಗಡ್ಡೆ (ಬೇಯಿಸಿ ಸ್ಮಾಶ್)
1/2 ಕಪ್ ಪನೀರ್ (ತುರಿದ)
2 ಟೇಬಲ್ಸ್ಪೂನ್ ಕಾರ್ನ್ ಫ್ಲೋರ್
1/2 ಟೀಸ್ಪೂನ್ ಉಪ್ಪು
ಎಣ್ಣೆ
3 ಟೊಮೆಟೊ (ಕತ್ತರಿಸಿದ)1 ಇಂಚು ಶುಂಠಿ,
ಎಸಳು ಬೆಳ್ಳುಳ್ಳಿ, ಈರುಳ್ಳಿ (ಕತ್ತರಿಸಿದ)
2 ಟೇಬಲ್ಸ್ಪೂನ್ ಎಣ್ಣೆ. ಕರಿಬೇವು, ಮಸಾಲೆ ಪದಾರ್ಥಗಳು
3 ಟೊಮೆಟೊ (ಕತ್ತರಿಸಿದ)
1/2ಈರುಳ್ಳಿ (ಸಣ್ಣಗೆ ಕತ್ತರಿಸಿದ)
1/2 ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ
1/2 ಟೀಸ್ಪೂನ್ ಕೊತ್ತಂಬರಿ ಪುಡಿ, ಸ್ಪೂನ್ ಜೀರಿಗೆ ಪುಡಿ
1/2 ಟೀಸ್ಪೂನ್ ಗರಂ ಮಸಾಲಾ, ಕಪ್ ಮೊಸರು
1 ಕಪ್ ನೀರು,ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಒಂದು ಮಿಕ್ಸಿಂಗ್‌ ಬೌಲ್‌ಗೆ ಮೊದಲು ತುರಿದ ಪನ್ನೀರ್‌ ಹಾಕಿ ಅದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿ ಮೊಟ್ಟೆಯೊಳಗಿನ ಎಲ್ಲೋ ಪಾರ್ಟ್‌ ಗಾಹಿ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ. ಮತ್ತದೇ ಬೌಲ್‌ಗೆ ಆಲೂಗಡ್ಡೆ, ಪನ್ನೀರ್‌, ಕಾನ್‌ಫ್ಲೋರ್‌, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ನಾದಿ ಅದನ್ನು ಒಂದು ಚಪ್ಪಟೆಯಾಗಿ ಮಾಡಿ ಅದರೊಳಗೆ ಪನ್ನೀರ್‌ ಉಂಡೆಯನ್ನಿಟ್ಟು ಮೊಟ್ಟೆಯಾಕಾರದಲ್ಲಿ ಸ್ಟಪ್‌ ಮಾಡಿ ಎಣ್ಣೆಗೆ ಹಾಕಿ ಸ್ವಲ್ಪ ಕಂದು ಬರುವವರೆಗೆ ಕರಿಯಿರಿ. ಒಂದು ಪ್ಯಾನ್‌ ಸ್ವಲ್ಪ ಎಣ್ಣೆ ಹಾಕಿ ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಚೆನ್ನಾಗಿ ಫ್ರೈ ಮಾಡಿ ತಣಿದ ಮೇಲೆ ನುಣ್ಣಗೆ ಪೇಸ್ಟ್‌ ಮಾಡಿ.

ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕರಿಬೇವು, ಮಸಾಲೆ ಪದಾರ್ಥಗಳು ಸೇರಿಸಿ ಹುರಿಯಿರಿ. ಬಳಿಕ ಟೊಮ್ಯಾಟೊ, ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಬಾಡಿಸಿ ಎಲ್ಲಾ ಮಸಾಲೆ ಪುಡಿ ಸೇರಿಸಿ ಕಲಕಿ ಮಿಕ್ಸಿ ಮಾಡಿಕೊಟ್ಟುಕೊಂಡ ಟೊಮ್ಯಾಟೊ ಪೇಸ್ಟ್‌ ಹಾಕಿ ಎಣ್ಣೆ ತೇಲುವವರೆಗೆ ಕುದಿಸಿ ನಂತರ ಅದಕ್ಕೆ ತೇಲಿಸಿದ ಆಲೂ ಎಗ್‌ ಹಾಕಿ ಮಸಾಲೆ ಹಿಡಿಯುವವರೆಗೆ ಐದು ನಿಮಿಷಗಳ ಕಾಲ ಕುದಿಸಿ ಕೊನೆಗೆ ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!