ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯಲ್ಲಿ ವಾಹನ ಕಮರಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ನೈನಿತಾಲ್‌ನ ಬೇಟಾಲ್‌ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ವಿಶ್ರಮ್ ಚೌಧರಿ (50), ಧೀರಜ್ (45), ಅನಂತರಾಮ್ ಚೌಧರಿ (40), ವಿನೋದ್ ಚೌಧರಿ (38), ಉದಯರಾಮ್ ಚೌಧರಿ (55), ತಿಲಕ್ ಚೌಧರಿ (45) ಗೋಪಾಲ್ ಬಸ್ನಿಯಾತ್ (60) ಮತ್ತು ರಾಜೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಶಾಂತಿ ಚೌಧರಿ, ಛೋಟು ಚೌಧರಿ ಮತ್ತು ಪ್ರೇಮ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ಬಸ್ಕೋಟ್ ಗ್ರಾಮದ ನಿವಾಸಿ ಚಾಲಕ ರಾಜೇಂದ್ರ ಕುಮಾರ್ (38) ವಾಹನದ ನಿಯಂತ್ರಣ ಕಳೆದುಕೊಂಡು 200 ಮೀಟರ್ ಕಮರಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.