ಬಟ್ಟೆ ಗಲೀಜು ಎಂದು ಕಾರ್ಮಿಕನ ಮೆಟ್ರೋ ಎಂಟ್ರಿ ನಿರಾಕರಿಸಿದ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಹಿಂದೆ ಕೂಡ ನಮ್ಮ ಮೆಟ್ರೋದಲ್ಲಿ ರೈತರೊಬ್ಬರಿಗೆ ಎಂಟ್ರಿ ನಿರಾಕರಿಸಿ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೆ ನಮ್ಮ ಮೆಟ್ರೋ ಇಂಥದ್ದೇ ಕೆಲಸದಿಂದ ವೈರಲ್‌ ಆಗಿದೆ.

ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಕಾರ್ಮಿಕನೊಬ್ಬನಿಗೆ ಬಟ್ಟೆ ಗಲೀಜಾಗಿದೆ, ಶರ್ಟ್‌ ಗುಂಡಿ ಹಾಗಿಲ್ಲ, ಬಟ್ಟೆ ಸರಿ ಮಾಡಿಕೊಂಡು ಗುಂಡಿ ಹಾಕಿಕೊಂಡು ಒಳಗೇ ಬಾ ಇಲ್ಲದಿದ್ರೆ ಎಂಟ್ರಿ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

ಎಲ್ಲರೆದುರು ಈ ರೀತಿ ಅಪಮಾನ ಮಾಡಿದ್ದನ್ನು ಕಂಡು ಜನರು ಮೆಟ್ರೋ ವಿರುದ್ಧ ಕಿಡಿಕಾರಿದ್ದಾರೆ. ಬಟ್ಟೆಗೂ ಮೆಟ್ರೋಗೂ ಏನು ಸಂಬಂಧ? ಅವರು ದುಡ್ಡು ಕೊಟ್ಟು ಟ್ರಾವೆಲ್‌ ಮಾಡೋದಿಲ್ವಾ ಎಂದು ಗರಂ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!