Wednesday, November 29, 2023

Latest Posts

ಅಕ್ರಮ ಸಾಗಾಟ ಮಾಡುತ್ತಿದ್ದ ಸಾಗುವಾನಿ ತುಂಡುಗಳ ಸಹಿತ ವಾಹನ ವಶಕ್ಕೆ: ಆರೋಪಿ ಪರಾರಿ

ಹೊಸ ದಿಗಂತ ವರದಿ, ಮುಂಡಗೋಡ:

ಅನಧಿಕೃತವಾಗಿ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಸಾಗುವಾನಿ ತುಂಡುಗಳನ್ನು ಓಮಿನಿ ಕಾರಿನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ದಾಳಿ ಮಾಡಿ ಸಾಗುವಾನಿ ತುಂಡುಗಳು ಸಮೇತ ವಾಹನ ವಶಕ್ಕೆ ಪಡೆದಿದ್ದಾರೆ. ಆರೋಪಿಯು ತಪ್ಪಿಸಿಕೊಂಡು ನಾಪತ್ತೆಯಾದ ಘಟನೆ ತಾಲೂಕಿನ ಪಾಳಾ ಗ್ರಾಮ ಪಂಚಾಯತ ವ್ಯಾಪ್ತಿಯ ಹುಡೆಲಕೊಪ್ಪ ಬಳಿ ಶನಿವಾರ ಜರುಗಿದೆ.

ಕಾತೂರ ವಲಯದ ಪಾಳಾ ಶಾಖೆಯ ಹುಡೆಲಕೊಪ್ಪ ಅರಣ್ಯವ್ಯಾಪ್ತಿಯಲ್ಲಿ ನಾಪತ್ತೆಯಾದ ರಾಮಾಪುರ ಗ್ರಾಮದ ಆರೋಪಿ ಕಾಂತೇಶ ಈಳಿಗೇರ ಇತನು ತನ್ನ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಕೊರೆದು ಸೈಜ್ ಮಾಡಿದ ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯವರು ದಾಳಿ ಮಾಡಿ ಸಾಗುವಾನಿ ತುಂಡುಗಳ ಸಮೇತ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಾಂತೇಶ ಮಾತ್ರ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಅರಣ್ಯ ಇಲಾಖೆಯವರು ಈತನ ಶೋಧಕಾರ್ಯ ನಡೆಸಿದ್ದಾರೆ.

ಡಿಎಪ್ಒ ಎಸ್ ಜಿ ಹೆಗಡೆ ಹಾಗು ಎಸಿಎಪ್ ರವಿ ಹುಲಕೋಟಿ ರವರ ಮಾರ್ಗದರ್ಶನದಲ್ಲಿ ಆರ್.ಎಪ್.ಒ ಮಂಜುನಾಥ ಎಚ್ ನಾಯ್ಕ ನೇತೃತ್ವದಲ್ಲಿ ಉಪ ವಲಯ ಅಣ್ಯಾಧಿಕಾರಿ ಚಂದ್ರಕಾಂತ ಮುಕ್ರಿ,ಅರಣ್ಯ ರಕ್ಷಕ ಮುತ್ತು ಹಳ್ಳಿ, ಸಿಬ್ಬಂದಿ ನಾರಾಯಣ ಓಣಿಕೇರಿ, ಪ್ರಕಾಶ ಬಳ್ಳಾರಿ, ಜಗದೀಶ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!