ಅಪಘಾತದಲ್ಲಿ ಜಪ್ತಿಯಾದ ವಾಹನಗಳನ್ನು 24 ಗಂಟೆಯೊಳಗೆ ಮಾಲೀಕರಿಗೆ ಹಸ್ತಾಂತರ: ಕಮಿಷನರ್ ಡಾ.ಸಲೀಂ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇನ್ಮುಂದೆ ಅಪಘಾತ ಪ್ರಕರಣದಲ್ಲಿ ಜಪ್ತಿಯಾದ ವಾಹನಗಳನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕೆಂದು ಬೆಂಗಳೂರು ಸಂಚಾರಿ ಪೊಲೀಸ್ ವಿಶೇಷ ಕಮಿಷನರ್ ಡಾ.ಸಲೀಂ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲ್ಲೇ ಸ್ಟೇಷನ್​ಲ್ಲಿ ​ಇರುತ್ತಿದ್ದವು. ಆದರೆ, ಇನ್ನು ಮುಂದೆ ಆ್ಯಕ್ಸಿಡೆಂಟ್ ಆದ 24 ಗಂಟೆಗಳಲ್ಲಿ ವಾಹನ ವಾಪಸ್ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಆಕ್ಸಿಡೆಂಟ್ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಆರ್​ಟಿಓ ದಿಂದ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಲಾಗುತ್ತದೆ. ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ವಾಹನಗಳನ್ನು ಸ್ಟೇಷನ್ ಮುಂದೆ ಇಟ್ಟುಕೊಂಡರೆ ಸಾಕಷ್ಟು ವಾಹನ ಬಂದು ಬೀಳುತ್ತವೆ. ಇದರಿಂದ ಸ್ಟೇಷನ್ ಕೂಡ ಲಕ್ಷಣವಾಗಿ ಕಾಣಿಸುವುದಿಲ್ಲ. ಪೊಲೀಸ್ ಠಾಣೆ ಸುತ್ತ ಮುತ್ತಲಿನ ಆವರಣ ಶುಚಿಯಾಗಿಡಬೇಕು. ಹೀಗಾಗಿ ಆಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಮುಂದೆ 24 ಗಂಟೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಮಾಹಿತಿ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!