WHITE TOPPING | ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಹಲವು ರಸ್ತೆಗಳಿಗೆ ವೈಟ್​ ಟಾಪಿಂಗ್​ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ  ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ವಿದ್ಯಾನಗರ ಕ್ರಾಸ್​ನಿಂದ ಬೆಲಕಾಂ ಲೇಔಟ್ (ವೆಂಕಟೇಶ್ವರ ತಾಂತ್ರಿಕ ಕಾಲೇಜ್) ರಸ್ತೆ, ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರ ನಿರ್ಬಂಧ ದಿನಾಂಕ, ಪರ್ಯಾಯ ಮಾರ್ಗ ಇಲ್ಲಿದೆ.

ವಿದ್ಯಾನಗರ ಕ್ರಾಸ್‌ನ ವಿಎನ್​ಎಸ್​ಐಟಿ ಕಾಲೇಜು ಕಡೆಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಟಾಪಿಂಗ್ (ಸಿಮೆಂಟ್ ರಸ್ತೆ) ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್​ 14ರವರೆಗೆ ವಿದ್ಯಾನಗರ ಕ್ರಾಸ್ ನಿಂದ ಬೆಲಕಾಂ ಲೇಔಟ್ (ವೆಂಕಟೇಶ್ವರ ತಾಂತ್ರಿಕ ಕಾಲೇಜ್)ವರೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!