CINE| ಹಿರಿಯ ನಟ ಅನಂತ್‌ನಾಗ್‌ಗೆ 75ರ ಸಂಭ್ರಮ, ವಿಶೇಷ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಹಿರಿಯ ನಟ ಅನಂತ್‌ನಾಗ್ ಅವರಿಗೆ ಇಂದು 75ರ ಜನ್ಮದಿನದ ಸಂಭ್ರಮ, ಸಿನಿಮಾ ರಂಗದಲ್ಲಿ ಬರೋಬ್ಬರಿ 50 ವರ್ಷಗಳನ್ನು ಪೂರೈಸಿದ ನಟನಿಗೆ ಸ್ಯಾಂಡಲ್‌ವುಡ್ ಶುಭಕೋರಿದೆ.

ಅನಂತ್‌ನಾಗ್ ಅವರ ಜತೆ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಸಿನಿಮಾ ಮಾಡಿದ ರಿಷಬ್ ಶೆಟ್ಟಿ ಅನಂತ್‌ನಾಗ್ ಅವರಿಗಾಗಿ ವಿಶೇಷ ವಿಡಿಯೋವೊಂದನ್ನು ಮಾಡಿ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಅನಂತ್‌ನಾಗ್ ಅವರ ಸಿನಿ ಪಯಣದ ಜರ್ನಿ ಇದಾಗಿದೆ.

ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು, ನಿಮ್ಮ ಪಯಣ ಸ್ಫೂರ್ತಿದಾಯಕ ಎಂದು ರಿಷಬ್ ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!