Sunday, December 3, 2023

Latest Posts

ಹಿರಿಯ ನಟ ಸುರೇಶ್ ಹೆಬ್ಳೀಕರ್ ಇಮೇಲ್ ಹ್ಯಾಕ್: 5 ಲಕ್ಷ ಹಣಕ್ಕೆ ಬೇಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿರಿಯ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಇಮೇಲ್ ಹ್ಯಾಕ್ ಆಗಿದ್ದು, ಹಣಕ್ಕಾಗಿ ಬೇಡಿಕೆ ಇಡಲಾಗಿದೆ.

ಹೆಬ್ಳಿಕರ್ ಅವರ ಹೆಸರಿನಲ್ಲಿ ಯಾರೋ ದುಷ್ಕರ್ಮಿಗಳು ಮೋಸ ಮಾಡಿದ್ದು, ಇಮೇಲ್ ಅಕೌಂಟ್ ಹ್ಯಾಕ್ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅವರ ವೈಯಕ್ತಿಕ ವಿವರಗಳು ಹಾಗೂ ದಾಖಲೆಗಳ ಪ್ರತಿಯನ್ನು ಕೂಡ ತೆಗೆದುಕೊಳ್ಳಲಾಗಿದೆ.ನಂತರ ಖದೀಮರು ಸುರೇಶ್ ಹೆಸರೇಳಿಕೊಂಡು ಹಲವರ ಬಳಿ ಹಣ ಕೇಳಿದ್ದಾರೆ.

ಈ ರೀತಿ ಮೆಸೇಜ್ ಬಂದರೆ ಪ್ರತಿಕ್ರಿಯೆ ನೀಡಬೇಡಿ, ನಿರ್ಲ್ಯಕ್ಷಿಸಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!