ಮದುವೆಗೆ ಕರೆಯಲು ಹೋದ ಹರ್ಷಿಕಾ ಪೂಣಚ್ಚಗೆ ಉಡುಗೊರೆಯಾಗಿ ಚಿನ್ನದ ಕಿವಿಯೋಲೆ ಕೊಟ್ಟ ಹಿರಿಯ ನಟಿ ಜಯಮಾಲಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ವಿವಾಹವಾಗುತ್ತಿದ್ದು , ಆ. 24 ಹಾಗೂ 25ರಂದು ಈ ಯುವಜೋಡಿಯ ವಿವಾಹ ಸಮಾರಂಭ ಕೊಡಗಿನಲ್ಲಿ ಅದ್ಧೂರಿಯಾಗಿ  ಕೊಡವ ಸಂಪ್ರದಾಯದಂತೆ ನಡೆಯಲಿದೆ.

ಇದೀಗ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮದುವೆಯ ಆಹ್ವಾನ ಪತ್ರಿಕೆ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರರಂಗದ ಹಲವು ಗಣ್ಯರನ್ನು ತಮ್ಮ ವಿವಾಹಕ್ಕೆ ಹರ್ಷಿಕಾ ಹಾಗೂ ಭುವನ್ ಆಹ್ವಾನಿಸಿದ್ದಾರೆ, ಹಿರಿಯ, ಕಿರಿಯ ಹೀಗೆ ಎಲ್ಲ ನಟ-ನಟಿಯರನ್ನು ತಮ್ಮ ಮದುವೆಗೆ ಈ ಜೋಡಿ ಆಹ್ವಾನಿಸುತ್ತಿದೆ.

ಕನ್ನಡದ ಹಿರಿಯ ನಟಿ ಜಯಮಾಲಾ ಅವರನ್ನು ಹರ್ಷಿಕಾ ಪೂಣಚ್ಚ ಮತ್ತು ಭುವನ್ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಈ ಸಂದರ್ಭ ನಟಿ ಜಯಮಾಲಾ, ಹರ್ಷಿಕಾ ಪೂಣಚ್ಚಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹರ್ಷಿಕಾ ಹಾಗೂ ಭುವನ್​ಗೆ ಜಯಮಾಲಾ ಆಶೀರ್ವಾದ ಮಾಡಿದ್ದಾರೆ.ಈ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!