ಸ್ಯಾಂಡಲ್‌ವುಡ್‌ನ ಹಿರಿಯ ನಟ ದ್ವಾರಕೀಶ್ ಗೆ ಗೌರವ ಡಾಕ್ಟರೇಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ನ ಹಿರಿಯ ನಟ ದ್ವಾರಕೀಶ್ ಅವರ ಕಲಾಸೇವೆ ಗುರುತಿಸಿ, ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ನೂರಾರು ಸಿನಿಮಾಗಳಲ್ಲಿ ನಟನೆ, 40ಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ಪ್ರತಿಭಾನ್ವಿತ ನಟ ದ್ವಾರಕೀಶ್‌ಗೆ ಬೆಂಗಳೂರು ವಿವಿ 57ನೇ ಘಟಿಕೋತ್ಸವದಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ.
ಚಲನಚಿತ್ರ ವಿಭಾಗದಲ್ಲಿ ದ್ವಾರಕೀಶ್, ಕಾನೂನು ಅಟಾರ್ನಿ ಹಾಗೂ ನ್ಯಾಯ ಸಲಹೆಗಾರರು ವಿಭಾಗ ಅಮರನಾಥ ಗೌಡ, ವರ್ಣ ಚಿತ್ರಕಾರರು ವಿಭಾಗ ಡಾ.ಟಿ. ಅನಿಲ್ ಕುಮಾರ್ ಸೇರಿದಂತೆ ಗೌರವ ಡಾಕ್ಟರೇಟ್ ಅನ್ನು ಡಿ.5ರಂದು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ನಡೆಯಲಿರುವ ಘಟಿಕೋತ್ಸವ ಪ್ರಧಾನ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!