ಗಾಯಕ ಕೆಕೆ ನಿಧನ: ಸಾವಿಗೂ ಮುನ್ನದ ಕೊನೆಯ ಕ್ಷಣದ ವಿಡಿಯೋಗಳು ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಹಠಾತ್​ ನಿಧನರಾಗಿದ್ದು, ಇದೀಗ ಅವರ ಕೊನೆಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋಲ್ಕತ್ತಾ ಸಂಗೀತ ಕಾರ್ಯಕ್ರಮದಿಂದ ಅವಸರದಲ್ಲೇ ಅವರು ಹೊರಗ ಬರುತ್ತಿರುವ ದೃಶ್ಯಗಳು ಇದಾಗಿದೆ.

53 ವರ್ಷದ ಕೆಕೆ ಗುರುದಾಸ್​ ಕಾಲೇಜಿನಲ್ಲಿ ಸಂಗೀತ ಪ್ರದರ್ಶನ ನೀಡುತ್ತಿದ್ದರು. ಆದರೆ, ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಹೀಗಾಗಿ ತಕ್ಷಣವೇ ಅವರು ಅಲ್ಲಿಂದ ಹೊರಟು ಬಂದಿದ್ದಾರೆ. ಈ ವೇಳೆ ಕೆಲವರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿವೆ.

 

ಸಂಗೀತ ಕಾರ್ಯಕ್ರಮದ ನಡೆಯುತ್ತಿದ್ದ ಆಡಿಟೋರಿಯಂನಲ್ಲಿ ಅಸ್ವಸ್ಥಗೊಂಡಿದ್ದ ಕೆಕೆ ಅವರನ್ನು ತಕ್ಷಣವೇ ಸಿಎಂಆರ್‌ಐ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆದಲ್ಲೇ ಕೊನೆಯುಸಿರೆಳೆದರು. ಇವರ ನಿಧನಕ್ಕೆ ಎದೆನೋವು ಜೊತೆಗೆ ಪಾರ್ಶ್ವವಾಯು ಸಹ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೇ, ಕೆಕೆ ತಲೆಯ ಮೇಲೆ ಕೆಲ ಗಾಯದ ಗುರುತುಗಳು ಸಹ ಕಂಡುಬಂದಿವೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎಸ್​ಎಸ್​ಎಂಕೆ ಆಸ್ಪತ್ರೆಯಲ್ಲಿ ಕೆಕೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರವೀಂದ್ರ ಸದನದಲ್ಲಿ ಪಾರ್ಥಿವ ಶರೀರ ಸ್ಥಳಂತರಿಸಲಾಗಿದ್ದು, ಇಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೆಕೆ ಕುಟುಂಬ ಸದಸ್ಯರು ಹಾಗೂ ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು.

ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಹಾಡಿರುವ ಕೃಷ್ಣಕುಮಾರ್ ಕುನ್ನತ್ ಚಿತ್ರರಂಗದಲ್ಲಿ ಕೆಕೆ ಎಂದೇ ಜನಪ್ರಿಯರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!