Sunday, February 5, 2023

Latest Posts

ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

86 ವರ್ಷದವರಾದ ಅಬೂಬಕ್ಕರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ಅವರು ಬಾಲ್ಯದಿಂದಲೇ ಬರವಣಿಗೆ ಮೇಲೆ ಆಸಕ್ತಿ ಹೊಂದಿದ್ದರು.

ಹೆಣ್ಣುಮಕ್ಕಳ ಸಂಕಟಗಳಿಗೆ ಕನ್ನಡಿ ಹಿಡಿಯುತ್ತಿದ್ದ ಸಾರಾ ಅವರ ಮೊದಲ ಕಾದಂಬರಿ ಚಂದ್ರಗಿರಿ ತೀರದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ವಾಸ್ತವಿಕ ಬದುಕಿನ ಚಿತ್ರಣವನ್ನು ಸಾಕಷ್ಟು ಮಂದಿ ಮೆಚ್ಚಿದ್ದು, ಕಾದಂಬರಿಗೆ ಜನಮನ್ನಣೆ ಸಿಕ್ಕಿತು. ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಸೌದಿಯ ವಹಾಬಿಸಂ ವಿರುದ್ಧ ಸಾರಾ ದನಿಯೆತ್ತಿದ್ದರು.

ಚಪ್ಪಲಿಗಳು, ಸಹನಾ, ವಜ್ರಗಳು, ಮಗಳು ಹುಟ್ಟಿದಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಕದನವಿರಾ, ಪ್ರಚಾಹ-ಸುಳಿ, ತಳ ಒಡೆದ ದೋಣಿ ಹೀಗೆ ಸಾಕಷ್ಟು ಕೃತಿಗಳಿಂದ ಅಸಂಖ್ಯಾತ ಓದುಗರ ಮನಸ್ಸನ್ನು ಅಬೂಬಕ್ಕರ್ ಮುಟ್ಟಿದ್ದರು.

ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮ್ಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಇನ್ನೂ ಸಾಕಷ್ಟು ಗೌವರಗಳು ದೊರಕಿವೆ.

ಮಂಗಳೂರಿನ ಹ್ಯಾಟ್ ಹಿಲ್ ಬಳಿ ಸಾರಾ ಅವರು ನೆಲೆಸಿದ್ದು, ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ನಡೆಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!