ಹೊಸದಿಗಂತ ವರದಿ, ಅಂಕೋಲಾ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಿಠೋಬ ನಾಯಕ ವಂದಿಗೆ (88) ಅವರು ಗುರುವಾರ ನಿಧನರಾದರು.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿ
ಸುಮಾರು 50 ವರ್ಷಗಳಿಗೂ ಹೆಚ್ಚಿನ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ ಇವರು ತಮ್ಮ ಗಂಭೀರ ಪಾತ್ರನಿರ್ವಹಣೆ, ಮನೋಜ್ಞ ಅಭಿನಯ, ಅದ್ಭುತ ಮಾತುಗಾರಿಕೆ ಮೂಲಕ ಗುರುತಿಸಿಕೊಂಡಿದ್ದರು.
ಗದಾಯುದ್ಧದ ಭೀಮ, ರಾವಣ,ಯಮ ಘಟೋದ್ಗಜ ಮೊದಲಾದ ಘೋರ ಪಾತ್ರಗಳಲ್ಲಿ ರೌದ್ರ ಅಭಿನಯದಿಂದ ಮನೆಮಾತಾದ ವಿಠೋಬ ನಾಯಕ ಅವರಿಗೆ ಯಕ್ಷರಂಗದ ಸೇವೆಗಾಗಿ 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಪುರಸ್ಕರಿಸಲಾಗಿತ್ತು.
ಯಕ್ಷದಿಗ್ಗಜ ವಿಠೋಬ ನಾಯಕ ಅವರ ನಿಧನಕ್ಕೆ ಯಕ್ಷರಂಗದ ಅನೇಕ ಹಿರಿ ಕಿರಿಯ ಕಲಾವಿದರು, ಯಕ್ಷರಂಗದ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.