ಸಿದ್ದೇಶ್ವರ ಶ್ರೀಗಳಿಗೆ ವಿಹೆಚ್‌ಪಿ ಗೌರವ ನಮನ: ಭಕ್ತಾದಿಗಳಿಗೆ ಮಹಾ ಪ್ರಸಾದದ ವ್ಯವಸ್ಥೆ

ಹೊಸದಿಗಂತ ವರದಿ ಕಲಬುರಗಿ:‌ 

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಲಬುರಗಿ ಮಹಾ ನಗರ ಘಟಕದ ವತಿಯಿಂದ ನಗರದ ಎಂಟು ಪ್ರಖಂಡಗಳಿಂದ, ನಾಲ್ಕು ಸ್ಥಳಗಳಲ್ಲಿ ಶ್ರೀಗಳಿಗೆ ಗೌರವ ನಮನ ಹಾಗೂ ಭಕ್ತಾದಿಗಳಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತ್ಯದ ಉಪಾಧ್ಯಕ್ಷ ಶ್ರೀ ಲಿಂಗರಾಜಪ್ಪಾ ಅಪ್ಪಾ ತಿಳಿಸಿದ್ದಾರೆ.

ನಗರದ ಬಸವೇಶ್ವರ ಪುತ್ತಳಿ ಆವರಣದಲ್ಲಿ ಮಂಗಳವಾರ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು,ಕಲಬುರಗಿ ನಗರದ ಐತಿಹಾಸಿಕ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ಮೊದಲು ಗೌರವ ನಮನ ಹಾಗೂ ಪ್ರಸಾದ ವ್ಯವಸ್ಥೆ, ಬಳಿಕ ಶ್ರೀ ರಾಮ ಮಂದಿರ, ಬಸವೇಶ್ವರ ದೇವಾಲಯ, ಜಗತ್ ವೃತ್ತದ ಹನುಮಾನ ಮಂದಿರ ‌ಸೇರಿದಂತೆ ನಾಲ್ಕು ಕಡೆಗಳಲ್ಲಿ ವಿ.ಎಚ್.ಪಿ.ವತಿಯಿಂದ ಗೌರವ ನಮನ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜೀವನದುದ್ದಕ್ಕೂ ಪಾರದಶ೯ಕವಾಗಿ ಬದುಕಿದ ಅವರು ತಮ್ಮ ಪ್ರವಚನಗಳ ಮೂಲಕ ಜನರ ಬದುಕನ್ನು ಹಸುನುಗೊಳಿಸುವ ಮಾಹಾನ್ ಕಾಯ೯ವನ್ನು ಮಾಡಿದ್ದಾರೆ. ಮುಖ್ಯವಾಗಿ ಜ್ಞಾನ, ಧ್ಯಾನ, ಮೌನ ಮತ್ತು ದಾಸೋಹದ ಪ್ರಾಮುಖ್ಯತೆ ಕುರಿತು ಹೆಚ್ಚಿನ ಒತ್ತು ನೀಡುತ್ತಿದ್ದ ಶ್ರೀಗಳು,ನುಡಿದಂತೆ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಪುರಾವೆಯಾಗಿ ಜೀವಿಸಿದ್ದರು ಎಂದು ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!