ಉಪರಾಷ್ಟ್ರಪತಿ ಚುನಾವಣೆ: ಮತದಾನ ಮುಕ್ತಾಯ, ಶೀಘ್ರದಲ್ಲೇ ಮತಎಣಿಕೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಪರಾಷ್ಟ್ರಪತಿ ಚುನಾವಣೆಯ ಮತದಾನ ಮುಕ್ತವಾಗಿದ್ದು, ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್, ಪ್ರತಿಪಕ್ಷದ ಮಾರ್ಗರೆಟ್ ಆಳ್ವಾ ವಿರುದ್ಧ ಸ್ಪರ್ಧಿಸುತ್ತಿರುವ ಚುನಾವಣೆಯಲ್ಲಿ ಉಭಯ ಸದನಗಳ ಸಂಸದರು ಮತ ಚಲಾಯಿಸುತ್ತಿದ್ದಾರೆ.
ಇದೀಗ ಮತದಾನ ಮುಕ್ತಾಯಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮತಏಣಿಕೆ ನಡೆದು, ಫಲಿತಾಂಶ ಘೋಷಣೆಯಾಗಲಿದೆ.
80 ವರ್ಷದ ಮಾರ್ಗರೆಟ್ ಆಳ್ವಾ ಅವರು ಕಾಂಗ್ರೆಸ್ ನ ಅನುಭವಿಯಾಗಿದ್ದು, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರೆ, 71 ವರ್ಷದ ಜಗದೀಪ್ ಧಂಕರ್ ಅವರು ಸಮಾಜವಾದಿ ಹಿನ್ನೆಲೆಯುಳ್ಳ ರಾಜಸ್ಥಾನದ ಜಾಟ್ ನಾಯಕರಾಗಿದ್ದಾರೆ.
ಇದೀಗ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಂಜೆ 6 ಗಂಟೆಯಿಂದ ಉಪ ರಾಷ್ಟ್ರಪತಿ ಚುನಾವಣೆಗೆ ನಡೆದಂತ ಮತದಾನದ ಮತಏಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಯಾರು ಗೆಲುವಿನ ನಗೆಯನ್ನು ಬೀರಿ, ಉಪರಾಷ್ಟ್ರಪತಿ ಹುದ್ದೆಗೆ ಏರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!