ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ರಶ್ಮಿಕಾ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಆಡ್ ಒಂದರಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಇದೀಗ ಚಾವಾ ಸಿನಿಮಾದಲ್ಲಿ ಕಾಣಿಸಲಿದ್ದಾರೆ.
ಸಂದರ್ಶನವೊಂದರಲ್ಲಿ ವಿಕ್ಕಿ ರಶ್ಮಿಕಾ ಕ್ಯಾರೆಕ್ಟರ್‌ನ್ನು ಹಾಡಿ ಹೊಗಳಿದ್ದಾರೆ. ರಶ್ಮಿಕಾ ಜೊತೆ ನಟಿಸಿದ ಅನುಭವದ ಬಗ್ಗೆ ನಟ ಮಾತನಾಡಿ, ಆಕೆ ಅದ್ಭುತ ವ್ಯಕ್ತಿ, ಯಾವಾಗ ಭೇಟಿಯಾದರೂ ಸದಾ ಪಾಸಿಟಿವಿಯಿಂದ ಇರುತ್ತಾರೆ ಎಂದಿದ್ದಾರೆ.
ಸೆಟ್‌ಗೆ ರಶ್ಮಿಕಾ ಬಂದಾಗ ಪಾಸಿಟಿವಿ ಇರುತ್ತದೆ. ಸದಾ ಕೆಲಸದಲ್ಲಿ ಅವರು ಬೆಂಬಲಿಸುತ್ತಾರೆ. ಚಾವಾ ಸಿನಿಮಾದಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಜೊತೆ ಉತ್ತಮ ಸಮಯ ಕಳೆದಿದ್ದೇನೆ. ಯಾವಾಗಲೂ ಅವರು ಖುಷಿಯಿಂದ ಇರುತ್ತಾರೆ. ಅದು ಹೇಗೆ ಎಂಬುದು ನನಗೆ ತಿಳಿದಿಲ್ಲ ಎಂದು ವಿಕ್ಕಿ ಕೌಶಲ್ ನಟಿಯನ್ನು ಕೊಂಡಾಡಿದ್ದಾರೆ