ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಮಹಾ ನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ವಿಶಾಲ ದಗಿ೯ ಹಾಗೂ ಉಪ ಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಗೊಂಡ ನಂತರ ಪಕ್ಷದ ಕಾಯ೯ಕತ೯ರು ಮೆರವಣಿಗೆ ಮೂಲಕ ವಿಜಯೋತ್ಸವ ಆಚರಿಸಿದರು.

ಶಹಾಬಜಾರ ನಾಕಾದಿಂದ ಪ್ರಾರಂಭವಾದ ಮೆರವಣಿಗೆ ಶೆಟ್ಟಿ ಟಾಕೀಸ್, ಖಾದ್ರಿ ಚೌಕ್ ಮೂಲಕ ಉಪ ಮಹಾ ಪೌರ ಶಿವಾನಂದ ಪಿಸ್ತಿ ಮನೆಯತ್ತ ತೆರಳಿತು. ಈ ಸಂದರ್ಭದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಉತ್ತರ ಮಂಡಲ ಅಧ್ಯಕ್ಷ ಅಶೋಕ್ ಮಾನಕರ್,ಪಾಲಿಕೆ ಸದಸ್ಯ ಸಚಿನ ಕಡಗಂಚಿ, ಕೃಷ್ಣ ನಾಯಕ್,ಸುನೀಲ್ ಮಚ್ಚೆಟ್ಟಿ, ಚನ್ನವೀರ ಲಿಂಗನವಾಡಿ ಸೇರಿದಂತೆ ಹಲವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!