ಫಿಲ್ಮ್‌ ಸಿಟಿಯಲ್ಲಿ ಚಿರತೆ ಮರಿಯನ್ನು ಅಟ್ಟಾಡಿಸಿದ ನಾಯಿಗಳು: ರಕ್ಷಣೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನ ಫಿಲ್ಮ್‌ಸಿಟಿಯಲ್ಲಿ ನಾಲ್ಕು ವಾರಗಳ ಚಿರತೆಯ ಮರಿ ಕಾಣಿಸಿಕೊಂಡಿದೆ. ಇದು ಎಲ್ಲಿಂದ ಬಂತು ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಫಿಲಿಮ್ ನಗರದ ಆರೆ ಕಾಲೋನಿ ಬಳಿ ಚಿರತೆಯ ಮರಿ ಪತ್ತೆಯಾಗಿದ್ದು, ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಚಿರತೆಯ ಮರಿಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿವೆ.

ಚಿರತೆಯ ಮರಿಯನ್ನು ನಾಯಿಗಳು ಹಿಂಬಾಲಿಸುತ್ತಿದ್ದಂತೆ ಸ್ಥಳೀಯ ಭದ್ರತಾ ಸಿಬ್ಬಂದಿ ಕೂಡಲೇ ಚಿರತೆ ಮರಿಯನ್ನು ರಕ್ಷಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮರಿಯನ್ನು ಸ್ಥಳೀಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಚಿರತೆಯ ಮರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಶೀಘ್ರದಲ್ಲೇ ತಾಯಿಯ ಬಳಿಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!