ವರನಾಗಿ ಸಂಭ್ರಮದಿಂದ ಬರಬೇಕಿದ್ದವ ಶವಪೆಟ್ಟಿಗೆಯಲ್ಲಿ ಬಂದ.. ಹೀಗೊಂದು ವಿಚಿತ್ರ ಮದುವೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮದುವೆ ಅಂದರೆ ಅದೊಂದು ಸಂಭ್ರಮ. ವಧು- ವರರು ಆ ಕಾರ್ಯಕ್ರಮದ ಸೆಂಟರ್‌ ಆಪ್‌ ಅಟ್ರಾಕ್ಷನ್‌ ಆಗಿ ಎಲ್ಲರ ಗಮನ ಹಿಡಿದಿಟ್ಟುಕೊಂಡಿರುತ್ತಾರೆ. ಮದುವೆ ಮನೆಯಲ್ಲಿ ಸ್ನೇಹಿತರ ಮೋಜು ಮಸ್ತಿ, ಬಂಧು ಬಾಂಧವರ ಸಮ್ಮಿಲನ, ಹೊಸ ಜೀವದ ಆರಂಭ.. ಹೀಗೆ ದಾಂಪತ್ಯಕ್ಕೆ ಕಾಲಿರಿಸುತ್ತಿರುವವರ ಪಾಲಿಗೆ ಅದೊಂದು ಸ್ಮರಣೀಯ ದಿನ. ಹಾಗೆಯೇ ಅಮೆರಿಕದ ನ್ಯೂಯಾರ್ಕ್‌ ನಲ್ಲೂ ಮದುವೆಯೊಂದು ಸಂಭ್ರಮದಿಂದ ನಡೆಯುತ್ತಿತ್ತು. ವಧು ಸಹ ಶೃಂಗಾರಗೊಂಡು ಕಾಯುತ್ತಿದ್ದಳು.. ಇನ್ನೇನು ವರ ಮಂಟಪಕ್ಕೆ ಬರಬೇಕು.. ಅಷ್ಟರಲ್ಲಿ ಅಲ್ಲಿ ಘಟಿಸಿದ ಘಟನಾವಳಿಗಳನ್ನು ನೋಡಿ ವಧು ದಿಗ್ಭಾಂತಳಾಗುತ್ತಾಳೆ.. ಮಂಟಪದಲ್ಲೂ ಸಹ ಕೋಲಾಹಲ ಎಳುತ್ತದೆ. ಸಂಭ್ರಮದ ಮನೆಯಲ್ಲಿ ಒಮ್ಮೆಲೆ ಶೋಕ ಆವರಿಸಿಕೊಳ್ಳುತ್ತದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನೆಂದರೆ..
ಸಂತಸದ ಗಳಿಗೆಯಲ್ಲೇ ವರನ ಕಡೆಯವರ ಕಾರು ಬಂದಿದೆ. ವಧುವಿನ ಕಡೆಯವರು ಅವರನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಓಡುತ್ತಾರೆ. ವಧು ಸಹ ನಾಚಿಕೆಯಿಂದ ಅತ್ತ ಕೊರಳು ಚಾಚಿ ನೋಡುತ್ತಾಲೆ. ಅಷ್ಟರಲ್ಲಿ ಅಲ್ಲಿನ ದೃಷ್ಯಾವಳಿಗಳನ್ನು ನೋಡಿ ಎಲ್ಲರೂ ಶಾಕ್‌ ಆಗುತ್ತಾರೆ. ಅ ಕಾರಿನಿಂದ ಇಳಿದ ವರನ ಕಡೆಯವರು ದೊಡ್ಡ ಶವದ ಪೆಟ್ಟಿಗೆಯೊಂದನ್ನು ಹೊತ್ತು ತರುತ್ತಾರೆ. ವರನ ನಿರೀಕ್ಷೆಯಲ್ಲಿ ಕಾಯುತ್ತಿದ್ದ ವಧುವಿನ ಮುಖದಲ್ಲಿ ಕಳವಳದ ಗೆರೆ, ಕಣ್ಣುಗಳು ಭಾರವಾಗುತ್ತದೆ. ನೆರೆದ ಅತಿಥಿಗಳಿಗೂ ಅಲ್ಲೇನು ನಡೆಯುತ್ತಿದೆಯೆಂಬ ಹಗೊಂದಲ.. ಪಟ್ಟಿಗೆ ಹೊತ್ತವರು ಮಂಟಪದ ಮಧ್ಯದಲ್ಲಿ ಆ ಪೆಟ್ಟಿಗೆ ಇರಿಸುತ್ತಾರೆ. ಅದರೊಳಗೆ ನೋಡಿದರೆ ವರ!

ಇದಾದ ಬಳಿಕ ವರ ಜೀವಂತವಾಗಿ ನಗುತ್ತಾ ಪೆಟ್ಟಿಗೆಯಿಂದ ಹೊರಬರುತ್ತಾನೆ. ಆತಂಕವೇ ಮೈವೆತ್ತಿದ್ದ ವಧುವಿನ ಮುಖದಲ್ಲಿ ಆನಂದಭಾಷ್ಪ. ಮಂಟಪದಲ್ಲಿದ್ದವರು ಸಹ ನಕ್ಕು ನಿರಾಳರಾಗುತ್ತಾರೆ. ವರ ಈ ರೀತಿ ಶವಪೆಟ್ಟಿಗೆಯಲ್ಲಿ ತನ್ನ ಮದುವೆಗೆ ಆಗಮಿಸುವುದು ವರನ ಸ್ನೇಹಿತರ ಪ್ಲಾನ್‌ ಅಂತೆ.. ಅತಿಥಿಗಳಲ್ಲೊಬ್ಬರು ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದು ಅದು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಕೆಲವರು ಇದೊಂದು ವಿನೂತನ ಪರಿಕಲ್ಪನೆಯೆಂದು ಮೆಚ್ಚಿಕೊಂಡರೆ, ಮತ್ತೆ ಕೆಲವರು ಮದುವೆಯಂತಹ ಸಂಭ್ರಮದ ಸಮಾರಂಭವನ್ನು ಶೋಕಾಚರಣೆಯ ಸ್ಥಳವನ್ನಾಗಿ ಮಾಡಿದ್ದಕ್ಕೆ ವರನನ್ನು ಟೀಕಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!