Thursday, March 30, 2023

Latest Posts

SHOCKING VIDEO| ನಡು ರಸ್ತೆಯಲ್ಲಿ ಯುವತಿಯನ್ನು ಥಳಿಸಿ ಕಾರಿನೊಳಗೆ ಎಳೆದೊಯ್ದ ಕಿರಾತಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿ ವ್ಯಕ್ತಿಯೊಬ್ಬ ಯುವತಿಯನ್ನು ಥಳಿಸಿ ಬಲವಂತವಾಗಿ ಕಾರಿನೊಳಗೆ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಾಹನ ಮತ್ತು ಚಾಲಕನನ್ನು ಪತ್ತೆಯಾಗಿದೆ.

ಕಾರನ್ನು ಗುರುಗ್ರಾಮ್‌ನ ರತನ್ ವಿಹಾರ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಕಂಡುಬಂದಿದೆ, ಅಲ್ಲಿಗೆ ಸಿಬ್ಬಂದಿ ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿ ಮಹಿಳೆಯ ಕಾಲರ್‌ ಹಿಡಿದು ಥಳಿಸಿ ಬಲವಂತವಾಗಿ ಕಾರಿನೊಳಗೆ ಕೂರುವಂತೆ ಮಾಡಿರುವುದನ್ನು ಕಾಣಬಹುದು. ಮಹಿಳೆಯನ್ನು ಕಾರಿನೊಳಗೆ ತಳ್ಳಿ ಥಳಿಸಿದ್ದು, ಇನ್ನೊಬ್ಬ ವ್ಯಕ್ತಿ ಕಾರಿನೊಳಗೆ ಬಂದು ಮಹಿಳೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ.

ಪೋಲೀಸರ ಪ್ರಕಾರ, ಇಬ್ಬರು ಪುರುಷರು ಮತ್ತು ಮಹಿಳೆ ವಿಕಾಸಪುರಿಗೆ ಉಬರ್ ಕಾರನ್ನು ಬುಕ್ ಮಾಡಿದ್ದರು ಮತ್ತು ದಾರಿಯಲ್ಲಿ ಅವರ ನಡುವೆ ಮಾರಾಮಾರಿ ನಡೆದಿದೆ.

ನಂತರ, ಮಹಿಳೆ ಕೆಳಗಿಳಿಯಲು ಯತ್ನಿಸಿದ ವೇಳೆ ಮಹಿಳೆಯನ್ನು ಬಲವಂತವಾಗಿ ಕಾರಿನೊಳಗೆ ತಳ್ಳುವುದು ವೀಡಿಯೊದಲ್ಲಿ ಕಂಡುಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!