ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲ್ ಫೋನಿನಲ್ಲಿ ಇರಲಿ.. ಕಂಪ್ಯೂಟರಿನಲ್ಲಿರಲಿ.. ಟಿವಿಯಲ್ಲಿ ಸೀರಿಯಸ್ಸಾಗಿ ನೋಡುತ್ತಿರುವಾಗ ಯಾವುದಾದರೂ ಆಟ ಆಡುವಾಗ ಯಾರಾದರೂ ಅಡ್ಡಿಪಡಿಸಿದರೆ ಕಿರಿಕಿರಿಯಾಗುತ್ತದೆ. ವೈರಲ್ ವಿಡಿಯೋದಲ್ಲಿ ಶ್ವಾನದ ರಿಯಾಕ್ಷನ್ ಕೂಡ ಹಾಗೇ ಇತ್ತು. ವೀಡಿಯೋ ಗೇಮ್ ಆಡುವಾಗ ಕಂಪ್ಯೂಟರ್ ಆಫ್ ಮಾಡುತ್ತಿದ್ದಂತೆ ಅದರ ನೋಟ ಎಲ್ಲರ ಮನಗೆದ್ದಿದೆ.
ಶ್ವಾನಗಳು ತುಂಬಾ ಬುದ್ಧಿವಂತವಾಗಿವೆ. ತರಬೇತಿ ಕೊಟ್ಟರೆ ಮಾನವ ಮಾಡುವ ಎಲ್ಲಾ ಕೆಲಸವನ್ನೂ ಅವೂ ಮಾಡುತ್ತವೆ. ಇನ್ಸ್ಟಾಗ್ರಾಮ್ ಬಳಕೆದಾರರು ಪ್ರಾಣಿ ಹೌಸ್ನಿಂದ ಹಂಚಿಕೊಂಡ ವೀಡಿಯೊದಲ್ಲಿ, ನಾಯಿಯೊಂದು ಕೀಬೋರ್ಡ್ ಬಳಸಿ ಗಂಭೀರವಾಗಿ ವಿಡಿಯೋ ಗೇಮ್ ಆಡುತ್ತಿದ್ದು, ಅದರ ಮಾಲೀಕರು ಕಂಪ್ಯೂಟರ್ ಅನ್ನು ಆಫ್ ಮಾಡಿದರು. ಕೂಡಲೇ ಕೀ ಬೋರ್ಡ್ ಪಕ್ಕಕ್ಕೆ ತಳ್ಳಿ ಅದರ ಮುಖದಲ್ಲಿ ತುಂಬಾ ಕೋಪ ಮತ್ತು ಹತಾಶೆ ಎದ್ದು ಕಾಣುತ್ತಿರುವುದು ಕಂಡು ಬಂತು.
ಇದಕ್ಕೆ ವಿಧವಿಧವಾದ ಕಮೆಂಟ್ ಬರುತ್ತಿದ್ದು, ನಾಯಿಗೆ ತುಂಬಾ ಕೋಪ ಬಂದಂತಿದೆ ಯಾಕೆ ಡಿಸ್ಟರ್ಬ್ ಮಾಡ್ತೀರಾ? ಎಂದು ತಮಾಷೆಯ ಎಮೋಜಿಗಳೊಂದಿಗೆ ಕಾಮೆಂಟ್ ಹಾಕಿದ್ದಾರೆ. ಅದೇನೇ ಇರಲಿ, ನಾಯಿ ತನ್ನ ಭಾವನೆಯಿಂದ ನೆಟ್ಟಿಗರ ಮನ ಕದ್ದಿದೆ.