ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋದಲ್ಲಿ ದಿನಕ್ಕೊಂದು ಘಟನೆಗಳು ನಡೆಯುತ್ತಿವೆ. ಒಬ್ಬ ವ್ಯಕ್ತಿ ಮಹಿಳಾ ಕೋಚ್‌ಗೆ ಹತ್ತಿ ಕಿರಿಕಿರಿ ಉಂಟುಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಮೆಟ್ರೋದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಇತ್ತೀಚಿನ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಮತ್ತು ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ವಿಟರ್ ಬಳಕೆದಾರ @gharkekalesh ಹಂಚಿಕೊಂಡ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮಹಿಳಾ ಕೋಚ್ ಅನ್ನು ಹತ್ತಿದ್ದಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಆತನನ್ನು ಪ್ರಶ್ನಿಸಿ ವಿಡಿಯೋ ತೆಗೆದಿದ್ದಾರೆ. ಮೆಟ್ರೋ ನಿಯಮಗಳನ್ನು ಪಾಲಿಸದೆ ಇದಕ್ಕೆ ವ್ಯತಿರಿಕ್ತವಾಗಿ, ವರ್ತಿಸಿದ್ದಕ್ಕೆ ಆಕೆ ಸಿಟ್ಟಿಗೆದ್ದರು. ಆ ವ್ಯಕ್ತಿ ತಾನು ಯಾರಿಗೂ ತೊಂದರೆ ನೀಡುತ್ತಿಲ್ಲ ತನ್ನ ಪಾಡಿಗೆ ತಾನಿರುವುದಾಗಿ ತಿಳಿಸಿದ್ದಾನೆ. ಆತನ ಜೊತೆಗಿದ್ದ ಮತ್ತೊಬ್ಬ ಮಹಿಳೆ ವಿಡಿಯೋ ತೆಗೆಯುತ್ತಿರುವ ಮಹಿಳೆಯನ್ನು ತಡೆಯಲು ಯತ್ನಿಸಿದ್ದಾಳೆ. ಒಂದು ಹಂತದಲ್ಲಿ ಅವರ ಮಾತಿನ ಸಮರ ತಾರಕಕ್ಕೇರಿತು.
ಇದನ್ನೆಲ್ಲ ಗಮನಿಸಿದ ಮತ್ತೊಬ್ಬ ಮಹಿಳೆ, ಮಹಿಳೆಯರ ಕೋಚ್‌ಗೆ ನೀವು ಹೇಗೆ ಹತ್ತಿದ್ದೀರಿ ಎಂದು ಪ್ರಶ್ನಿಸಿದರು. ಕೂಡಲೇ ಮುಂದಿನ ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿದರು. ಈ ವಿಡಿಯೋ ನೋಡಿದ ನೆಟ್ಟಿಗರು ದೆಹಲಿ ಮೆಟ್ರೋದಲ್ಲಿ ಏನು ಬೇಕಾದರೂ ಸಾಧ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ.
Kalesh b/w Ladies and a Guy over He Stepped up Into ladies Coach in Delhi Metro pic.twitter.com/wzks795oqW
— Ghar Ke Kalesh (@gharkekalesh) August 25, 2023