VIRAL VIDEO| ಚಟ್ನಿಯೊಳಗೆ ಸುಡುವ ಇದ್ದಿಲು ಹಾಕಿದ ವ್ಯಾಪಾರಿ, ನೆಟ್ಟಿಗರು ಏನಂದ್ರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು ಸ್ಟ್ರೀಟ್‌ನಲ್ಲಿ ಮಾರಾಟಗಾರರೊಬ್ಬರು ನಿಗಿ ನಿಗಿ ಇದ್ದಿಲನ್ನು ಹಸಿರು ಚಟ್ನಿಯಲ್ಲಿ ಹಾಕಿ ತಯಾರಿಸಿದ ರೀತಿಗೆ ನೆಟ್ಟಿಗರು ಆತಂಕ ಹೊರಹಾಕಿದ್ದಾರೆ. ಇದ್ಯಾವ ಥರದ ಅಡುಗೆ ಸ್ವಾಮೀ ಎಂಬ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಇತ್ತೀಚೆಗೆ ಸ್ಪೆಷಲ್‌ ಆಗಿಸುವ ಉದ್ದೇಶದಿದಂ ತಹರೇವಾರಿ ಪಾಕ ವಿಧಾನಗಳು ನೆಟ್‌ನಲ್ಲಿ ಕಾಣಸಿಗುತ್ತಿವೆ ಅದರಲ್ಲಿ ಈ ಚಟ್ನಿಯೂ ಒಂದು. ಜಮ್ಮುವಿನ ಬೀದಿ ಆಹಾರ ವ್ಯಾಪಾರಿಯೊಬ್ಬರು ‘ಆಗ್ ವಾಲಿ ಚಟ್ನಿ’ ಎಂಬ ವಿಶೇಷ ಖಾದ್ಯವನ್ನು ತಯಾರಿಸಿದ್ದಾರೆ. ಆತ ತಟ್ಟೆಯಲ್ಲಿ ಎರಡು ದೊಡ್ಡ ಇದ್ದಿಲಿನ ತುಂಡುಗಳನ್ನು ಇಟ್ಟು..ಅದರ ಮೇಲೆ ಎಣ್ಣೆ ಸುರಿದ ಚಟ್ನಿಯ ಪಾತ್ರೆಯೊಳಕ್ಕೆ ಹಾಕಿದ್ದಾನೆ.

ಪಾತ್ರೆಯನ್ನು ಕೆಲವು ನಿಮಿಷಗಳ ಕಾಲ ಮುಚ್ಚಿಟ್ಟು ನಂತರ ಚಟ್ನಿ ಮಿಕ್ಸ್ ಮಾಡಿ ಎಲ್ಲರಿಗೂ ಬಡಿಸಿದರು. thatdelhifoodie ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಡುಗೆಯಲ್ಲಿ ʻಇದ್ದಿಲು ಬೆರೆಸುವುದು ಕ್ಯಾನ್ಸರ್ ಕಾರಕ…ಕನಿಷ್ಠ ಇದನ್ನು ಅಧ್ಯಯನ ಮಾಡಿ’, ‘ಇದು ಕ್ಯಾನ್ಸರ್ ಚಟ್ನಿ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!