ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲತೀರ, ನದಿ, ಹಳ್ಳ-ಕೊಳ್ಳಗಳ ಬಳಿ ಎಷ್ಟು ಜಾಗರೂಕರಾದ್ದರೂ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಕೆಲವು ವೀಡಿಯೊಗಳು ಎಚ್ಚರಿಸುತ್ತಲೇ ಇರುತ್ತವೆ. ಇದೀಗ ಸಮುದ್ರತೀರದಲ್ಲಿ ಭಾರಿ ಅಲೆಗಳ ಮಧ್ಯೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಮುಂಬೈನ ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡ್ ಪ್ರದೇಶದಲ್ಲಿ ಕುಟುಂಬವೊಂದು ಪಿಕ್ನಿಕ್ ಗೆ ಬಂದಿತ್ತು. ಸಮುದ್ರದಲ್ಲಿ ಭಾರಿ ಅಲೆಗಳು ಎದ್ದಿದ್ದರಿಂದ ಅಧಿಕಾರಿಗಳು ಬೀಚ್‌ಗೆ ನಿರ್ಬಂಧ ಹೇರಿದ್ದಾರೆ. ಆದರೂ ಅದನ್ನು ನಿರ್ಲಕ್ಷಿಸಿ ಇಡೀ ಕುಟುಂಬ ಫೋಟೋಗಳನ್ನು ತೆಗೆದುಕೊಳ್ಳಲು ಸಮುದ್ರದ ಬಳಿ ಹೋದರು. ಜ್ಯೋತಿ ಮತ್ತು ಮುಖೇಶ್ ದಂಪತಿ ಬಂಡೆಯ ಮೇಲೆ ಕುಳಿರು ಪೋಸ್ ನೀಡುವ ವೇಳೆ ಬಂದ ರಕ್ಕಸ ಅಲೆ ಜ್ಯೋತಿಯನ್ನು ಎಳೆದೊಯ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋ ಮಾಡುತ್ತಿದ್ದ ಮಕ್ಕಳು ಮಮ್ಮಿ..ಮಮ್ಮಿ ಎಂದು ಅಳುತ್ತಿದ್ದರು. ಕೆಲವೇ ಸೆಕೆಂಡ್ ಗಳಲ್ಲಿ ಜ್ಯೋತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬಾಂದ್ರಾ ಕೋಟೆಯಲ್ಲಿ ಮುಳುಗಿ ಸಾವನ್ನಪ್ಪಿದ ಆಕೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಅಂತಿಮವಾಗಿ ಭಾರತೀಯ ಕೋಸ್ಟ್ ಗಾರ್ಡ್ ಆಕೆಯ ದೇಹವನ್ನು ಹೊರತೆಗೆದರು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.