Wednesday, December 7, 2022

Latest Posts

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ: ಪ್ರಜ್ಞಾಹೀನ ರೋಗಿಯ ರಕ್ತ ನೆಕ್ಕಿದ ನಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನುಷ ಘಟನೆ ನಡೆದಿದೆ. ಪ್ರಜ್ಞಾಹೀನ ವ್ಯಕ್ತಿ ರಕ್ತಸ್ರಾವವಾಗಿ ಬಿದ್ದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಸ್ಪತ್ರೆಗೆ ನುಗ್ಗಿದ ನಾಯಿಯೊಂದು ಆ ರಕ್ತವನ್ನೆಲ್ಲ ನೆಕ್ಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕುಶಿನಗರ ಜಿಲ್ಲಾಸ್ಪತ್ರೆಯಲ್ಲಿ ಕರ್ಮಕಾಂಡ ಎಲ್ಲೆಡೆ ಬಯಲಾಗುತ್ತಿದೆ.

ವಿವರಗಳ ಪ್ರಕಾರ. ಬಿಟ್ಟು (24) ಎಂಬ ವ್ಯಕ್ತಿ ರಸ್ತೆ ಅಪಘಾತಕ್ಕೀಡಾಗಿದ್ದರಿಂದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಚಿಕಿತ್ಸೆ ನೀಡದೆ ಹಾಗೆ ಬಿಟ್ಟಿದ್ದಾರೆ. ಹಾಸಿಗೆಯ ಮೇಲೆ ಮಲಗಿಸಿದ ಆತ ನೆಲಕ್ಕುರಿಳಿದ್ದಾನೆ.

ನೆಲಕ್ಕೆ ಬಿದ್ದ ಕೂಡಲೇ ಮೊದಲೇ ಗಾಯಗೊಂಡಿದ್ದ ಬಿಟ್ಟುವಿನ ದೇಹದಿಂದ ರಕ್ತ ಹರಿಯತೊಡಗಿದೆ. ಇಷ್ಟೆಲ್ಲಾ ನಡೆದರೂ ಆಸ್ಪತ್ರೆಯಲ್ಲಿ ಯಾರೊಬ್ಬರು ಆತನ ರಕ್ಷಣೆಗೆ ಧಾವಿಸಿಲ್ಲ. ಅಲ್ಲಿದ್ದ ನಾಯಿಯೊಂದು ಬಂದು ನೆಲದ ಮೇಲೆ ಹರಿಯುತ್ತಿದ್ದ ರಕ್ತವನ್ನು ನೆಕ್ಕಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ ನಾಲ್ವರು ವಾರ್ಡ್ ಬಾಯ್ ಗಳನ್ನು ಅಮಾನತು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!