ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ತಿಂಗಳು ವಿರೋಧ ಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಸ್ಥಾನ ಕಳೆದುಕೊಂಡಿದ್ದ ಇಮ್ರಾನ್ ಖಾನ್, ಈಗಿನ ಸರ್ಕಾರದ ವಿರುದ್ಧ ಸೆಡ್ಡು ಹೊಡೆಯಲು ತೊಡೆ ತಟ್ಟಿ ನಿಂತಿದ್ದಾರೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ ತಮ್ಮನ್ನು ತಾವು ಕತ್ತೆಗೆ ಹೋಲಿಸಿಕೊಂಡಿದ್ದಾರೆ. ಪ್ಯಾಡ್‌ಕಾಸ್ಟ್ ರೆಕಾರ್ಡಿಂಗ್‌ನಲ್ಲಿ ವಿವಿಧ ದೇಶಗಳ ಜತೆಗಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಾ, ಬ್ರಿಟನ್‌ನಲ್ಲಿ ಕಳೆದ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಸ್ಮರಿಸಿದರು.
ಬ್ರಿಟನ್‌ನ ಅನೇಕ ಸ್ನೇಹಿತರು ಮತ್ತು ಅಭಿಮಾನಿಗಳು ನನಗೆ ಸದಾ ಬೆಂಬಲ ನೀಡುತ್ತಾರೆ ಎಂದರು. ಆದರೂ ಇದುವರೆಗೂ ಆ ದೇಶವನ್ನು ನನ್ನ ತಾಯ್ನಾಡು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ, ನಾನು ಪಾಕಿಸ್ತಾನಿ, ಪಾಕಿಸ್ತಾನ ನನ್ನ ತಾಯ್ನಾಡು ಎಂದು ಬಣ್ಣಿಸಿದರು. ಈ ವೇಳೆ ನೀವು ಕತ್ತೆಯ ಮೇಲೆ ಗೆರೆ ಎಳೆದರೆ ಝೀಬ್ರಾ ಆಗಿ ಬದಲಾಗುವುದಿಲ್ಲ. ಕತ್ತೆ ಕತ್ತೆಯಾಗಿಯೇ ಉಳಿಯುತ್ತದೆ ಎಂದು ಖಾನ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ಅನ್ನು ಹಸನ್ ಜೈದಿ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಕತ್ತೆ ಕತ್ತೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Without comment. pic.twitter.com/l0Jwpomqvp
— Hasan Zaidi (@hyzaidi) May 6, 2022