April 13, 2026
Monday, April 13, 2026
spot_img

ಯುಎಇಯಲ್ಲಿ ಇರಾನ್ ದಾಳಿಯ ವಿಡಿಯೋ ಶೇರ್: 45 ಮಂದಿಯ ಅರೆಸ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್-ಅಮೆರಿಕಾ ಜಂಟಿಯಾಗಿ ಇರಾನ್‌ ಮೇಲೆ ಸಮರ ಸಾರುತ್ತಿದ್ದು, ಇದರಿಂದ ಕೆರಳಿದ ಇರಾನ್‌ ಗಲ್ಫ್‌ ಪ್ರದೇಶದಲ್ಲಿನ ಎಲ್ಲ‌ ಅರಬ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ .

ಈ ರೀತಿ ಗಲ್ಫ್‌ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿರುವ ವಿಡಿಯೋಗಳನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದರೂ ಕೂಡ ಅನೇಕರು ಹಂಚಿಕೊಂಡಿದ್ದು, ಅಂತಹವರಿಗೆ ಅಬುಧಾಬಿ ಪೊಲೀಸರು ಇದೀಗ ಬಿಸಿ ಮುಟ್ಟಿಸಿದ್ದು, ಸುಮಾರು 45 ಮಂದಿಯನ್ನು ಬಂಧಿಸಿದ್ದಾರೆ.

ಈ ರೀತಿ ದಾಳಿಯ ವಿಡಿಯೋ ಹಂಚಿಕೊಂಡಾಗ ಅದು ಜನತೆಯಲ್ಲಿ ಅಂತಕ ಹೆಚ್ಚಿಸುತ್ತದೆ ಜೊತೆಗೆ ಪ್ರಚೋದಿಸುವ ಮತ್ತು ಸಮುದಾಯದಲ್ಲಿ ದಾರಿತಪ್ಪಿಸುವ ಕೃತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುಎಇ ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸಿ ಅವರು ಕೂಡ ಯುದ್ಧದ ಆರಂಭದಲ್ಲೇ ಈ ಕುರಿತು ಎಚ್ಚರಿಕೆ ನೀಡಿದ್ದರು. ಆದರೂ ಅನೇಕರು ನಿಯಮ ಉಲಂಘಿಸಿದ್ದು, ಅಂತಹವರನ್ನು ಯುಎಇ ಕಾನೂನಿನ ಅಡಿಯಲ್ಲಿ ಬಂಧಿಸಿದ್ದಾರೆ.

ಯುಎಇ ಕಾನೂನಿನ ಅಡಿಯಲ್ಲಿ ಸೈಬರ್ ಅಪರಾಧದ ಕಾನೂನುಗಳನ್ನು ಉಲ್ಲಂಘಿಸುವ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ದಾರಿತಪ್ಪಿಸುವ ವರದಿಗಳು ಅಥವಾ ಅಧಿಕೃತವಾಗಿ ಘೋಷಿಸಲಾದ ಮಾಹಿತಿಗೆ ವಿರುದ್ಧವಾಗಿ ವದಂತಿಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದರೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ AED 100,000 ದಂಡ ವಿಧಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !