Tuesday, August 16, 2022

Latest Posts

ವೈರಲ್ ಆಗ್ತಿದೆ ಮುರುಘಾ ಮಠದಲ್ಲಿ ಪ್ರಸಾದ ತಿಂದ ರಾಹುಲ್ ವಿಡಿಯೋ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ಶ್ರೀ ಮುರುಘಾ ಮಠ ಭೇಟಿಯ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸಾದ ಸ್ವೀಕರಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್, ಇಂದು ಶ್ರೀ ಮಠಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಅರ್ಚಕರು ಅವರಿಗೆ ಶ್ರೀ ದೇವರ ಪ್ರಸಾದ ನೀಡಿದ್ದರು. ರಾಹುಲ್, ದೇವರ ಪ್ರಸಾದವನ್ನು ಬಾಯಿಗೆ ಹಾಕಿಕೊಂಡಿರುವ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ತೀರ್ಥದಲ್ಲಿ ಕಡಲೆಕಾಯಿ ಹಾಕಿಕೊಟ್ಟಿದ್ದರಾ? ಎಂದು ಕೆಲವರು ಕೇಳಿದ್ದರೆ, ಇನ್ನು ಕೆಲವರು ಏನ್ ಗುಳಿಗೆ ಕೊಟ್ಟರಾ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ದೀಕ್ಷೆ ಪಡೆದುಕೊಂಡ ಬಳಿಕ ನಂಬಿಕೆ ಪಾಲಿಸಬೇಕು. ರಾಜಕೀಯ ಲಾಭಕ್ಕಾಗಿ ನಂಬಿಕೆಗಳನ್ನು ಲೇವಡಿ ಮಾಡಬಾರದು ಎಂದು ಚಾಟಿ ಬೀಸಿದ್ದಾರೆ.
ಈ ವೀಡಿಯೋವನ್ನು ಬಿಜೆಪಿ ಕರ್ನಾಟಕ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಎಲೆಕ್ಷನ್ ಹಿಂದು’ ರಾಹುಲ್ ಗಾಂಧಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss