Wednesday, June 7, 2023

Latest Posts

VIRAL VIDEO| ಏನ್‌ ತಾಯಿ…ಫೋನ್‌ ನೋಡ್ತಾ ರೈಲು ನಡೆಸೋದಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಾಲನೆ ಮಾಡುವಾಗ ಯಾವಾಗಲೂ ಎಚ್ಚರದಿಂದಿರಿ. ಸ್ವಲ್ಪ ಎಚ್ಚರ ತಪ್ಪಿದರೂ ಉಸಿರು ನಿಲ್ಲುವ ಅದೆಷ್ಟೋ ದುರಂತಗಳನ್ನು ನೋಡಿದ್ದೇವೆ. ಅದರಲ್ಲೂ ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ ಅತ್ಯಂತ ಪ್ರಮಾದಕರ. ಅದೇ ರೀತಿ ಮಹಿಳೆಯೊಬ್ಬರು ರೈಲು ಓಡಿಸುವಾಗ ಮೊಬೈಲ್ ಬಳಸಿದ್ದಕ್ಕೆ ಉಂಟಾದ ಅವಾಂತರ ಅಷ್ಟಿಷ್ಟಲ್ಲ. ಆಕೆ ತನ್ನ ಸೆಲ್ ಫೋನ್‌ನಲ್ಲಿ ತೊಡಗಿದ್ದಾಗ, ರೈಲು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮಹಿಳಾ ಲೋಕೋ ಪೈಲಟ್ ರೈಲನ್ನು ಓಡಿಸುತ್ತಿದ್ದಾರೆ. ಆ ವೇಳೆ ತನ್ನ ಫೋನನ್ನು ನೋಡುತ್ತಾ ಅದರಲ್ಲಿ ಮುಳುಗುತ್ತಾರೆ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ರೈಲು ಬರುತ್ತಿದೆ ಎಂಬುದನ್ನು ಮರೆತಿದ್ದಾರೆ. ತೀರಾ ರೈಲನ್ನು ತಲುಪಿದ ಕೂಡಲೇ ತನ್ನ ಫೋನ್ ಅನ್ನು ಕೈಬಿಟ್ಟು ರೈಲನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೂ ಮೊದಲೇ ನಡೆಯಬಹುದಾದ ಅನಾಹುತ ನಡೆದು ಹೋಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!