ಅಂಗಡಿಯಲ್ಲಿ ಪೊಲೀಸ್ ಗನ್ ಮಿಸ್ ಫೈರ್, ನೌಕರನಿಗೆ ಗಂಭೀರ ಗಾಯ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂಗಡಿಯಲ್ಲಿ ಪೊಲೀಸ್ ಬಂದೂಕು ಮಿಸ್‌ಫೈರ್ ಆಗಿದ್ದು, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡೇಟಿನಿಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂಜಾಬ್‌ನ ಅಮೃತಸರದಲ್ಲಿ ಈ ಘಟನೆ ನಡೆದಿದೆ. ಪೋಲೀಸನೊಬ್ಬ ಮೊಬೈಲ್ ಅಂಗಡಿಗೆ ಹೋಗಿ ತನ್ನ ಜೇಬಿನಿಂದ ಬಂದೂಕನ್ನು ಹೊರತೆಗೆದು ಮತ್ತೊಬ್ಬನಿಗೆ ತೋರಿಸುವಾಗ ಇದ್ದಕ್ಕಿದ್ದಂತೆ ಫೈರ್‌ ಆಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಘಟನೆಯ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಕುರಿತು ಅಮೃತಸರ ಉತ್ತರ ಎಸಿಪಿ ವೀರೇಂದ್ರ ಸಿಂಗ್, “ಈ ಘಟನೆಯ ತನಿಖೆ ನಡೆಯುತ್ತಿದೆ. ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಾಯಗೊಂಡಿರುವ ಮೊಬೈಲ್ ಅಂಗಡಿ ನೌಕರನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ,” ಎಂದು ಹೇಳಿದರು. ಗನ್ ಮಿಸ್ ಫೈರ್‌ಗೆ ಕಾರಣವಾದ ಪೊಲೀಸ್ ಅಧಿಕಾರಿಯನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!